ಪುತ್ತೂರು ನಗರದ ಮಹಾಮಾಯಿ ಟೆಂಪಲ್ ರಸ್ತೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ಗತಿಕ ವೃದ್ಧರೊಬ್ಬರನ್ನು ಇಂದು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ನೆಲ್ಲಿಕಟ್ಟೆಯ ಲಾಕ್ ಡೌನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ಸೇರಿಸಿದ್ದರು.
ವ್ಯಕ್ತಿಯನ್ನು ಹಾಸನ ಮೂಲದ ಗೋಪಾಲ ಗೌಡ ಎಂಬ ಹೆಸರಿನ 65 ವರ್ಷ ಪ್ರಾಯದ ವ್ಯಕ್ತಿ ಕಳೆದ ಹಲವು ಸಮಯದಿಂದ ಪುತ್ತೂರಿನಲ್ಲೇ ಇದ್ದು ಯಾರಾದರೂ ಏನಾದರೂ ಕೊಟ್ಟರೆ ತಿಂದು ರಸ್ತೆ ಬದಿ ಮಲಗುತ್ತಾ ದಿನ ದೂಡುತ್ತಿದ್ದರು. ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ನೇತೃತ್ವದ ತಂಡ ಸಿಬ್ಬಂದಿಗಳ ಸಹಕಾರದಿಂದ ನಿರ್ಗತಿಕ ವೃದ್ಧನನ್ಬು ಸರಕಾರಿ ಆಸ್ಪತ್ರೆಗೆ ಕರೆತಂದರು. ವೃದ್ಧನ ಮೈಮೇಲೆ ಬಿದ್ದು ಗಾಯಗೊಂಡ ರೀತಿ ರಕ್ತ ಸುರಿಯುತ್ತಿದ್ದು, ಅದಕ್ಕೆ ಪ್ರ ಥಮ ಚಿಕಿತ್ಸೆ ಕೊಡಿಸಲಾಯಿತು.ಬಳಿಕ ಹೊಸ ಉಡುಪು ತರಿಸಿ ವೃದ್ಧನಿಗೆ ತೊಡಿಸಲಾಯಿತು. ಬಳಿಕ ನೆಲ್ಲಿಕಟ್ಟೆಯಲ್ಲಿರುವ ತಾತ್ಕಾಲಿಕ ಪಾಲನಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
ಇದೀಗ ಕೈಗೆ ಗಾಯ ಗೊಂಡಿದ್ದ ಕಾರಣ ವೃದ್ದನಿಗೆ ನಗರ ಸಭಾ ಹಿರಿಯ ಆರೋಗ್ಯಾಧಿಕಾರಿ ಶ್ವೇತ ಕಿರಣ್ ರವರು ತಾವೇ ಊಟ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.