ಪುತ್ತೂರು: ಮೊಟ್ಟೆತ್ತಡ್ಕ ದಿ. ಲೂವಿಸ್ ಲೋಬೋ ಹಾಗೂ ದಿ.ಜೋಸ್ಫಿನ್ ಲೋಬೋರವರ ಪುತ್ರ ಜೋಸೆಫ್ ಲೋಬೋ(52ವ.) ರವರು ಕೋವಿಡ್ ನಿಂದ ಮೆ 12 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮೃತರು ಸಹೋದರರಾದ ಹೆನ್ರಿ ವಿರಾಜಪೇಟೆ, ಬರ್ನಾರ್ಡ್ ಮಹಾರಾಷ್ಟ್ರ, ಗಿಲ್ಬರ್ಟ್ ಮೊಟ್ಟೆತ್ತಡ್ಕ ಪುತ್ತೂರು, ವಲೇರಿಯನ್ ಹೈದರಾಬಾದ್, ಮ್ಯಾಕ್ಸಿಂ ಕೊಕ್ಕಡ, ಸಹೋದರಿಯರಾದ ರೀಟಾ ಬೆಂಗಳೂರು, ಐರಿನ್ ಗೋವಾ, ಧರ್ಮಭಗಿನಿ ಸಿ/ಸುಪ್ರೀತಾ ಚಂಡೀಗಢರವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಕೋವಿಡ್ ನಿಯಮದಂತೆ ಕೊಕ್ಕಡ ಚರ್ಚ್ ನಲ್ಲಿ ನೆರವೇರಿತು.