ಜಾತಿ ಧರ್ಮವೆಂಬ ಬೇಧಭಾವವಿಲ್ಲದೆ, ರೋಗಿಯ ಆರೈಕೆ – ಶುಶ್ರೂಷೆಯನ್ನೇ ಧ್ಯೇಯವನ್ನಾಗಿಸಿಕೊಂಡು, ಅಪಾಯಕಾರಿ ಸೋಂಕಿನ ವಿರುದ್ಧ ದಿಟ್ಟತನದಿ ಹೋರಾಡುತ್ತಿರುವ ದಾದಿಗಳ ದಿನವಿದು..ಅಂತರರಾಷ್ಟ್ರೀಯ ದಾದಿಯರ ದಿನದಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಪುತ್ತೂರಿಗೆ ಭೇಟಿ ನೀಡಿ ದಾದಿಯರಿಗೆ ವಿಶೇಷ ಶುಭಾಶಯ ತಿಳಿಸಿದರು.