ಪುತ್ತೂರು : ವ್ಯಕ್ತಿಯೋರ್ವರಿಗೆ ತಂಡವೊಂದು ಹಲ್ಲೆ ನಡೆಸಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶ ಮೂಲದ ಬಿಲಾಲ್ ಎಂಬವರು ನೀಡಿದ ದೂರಿನ ಮೇರೆಗೆ ಅಬ್ದುಲ್ ರಜಾಕ್ ನರಿಮೊಗರು, ಶಕೀಲ್ ಸವಣೂರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಮ್ಮದ್ ಬಿಲಾಲ್ ಎಂಬವ ಅ.2 ರಂದು ರಾತ್ರಿ ಸೆಲೂನ್ ಬಂದ್ ಮಾಡಿ ಊಟಕ್ಕೆಂದು ವಾಹನಕ್ಕಾಗಿ ಕಾಯುತ್ತಿದ್ದಾಗ, ಸೆಲೂನ್ ಮಾಲಕರಾದ ಅಬ್ದುಲ್ ರಜಾಕ್ ನರಿಮೊಗರು, ಶಕೀಲ್ ಸವಣೂರು ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳು ಅಲ್ಲಿಗೆ ಕಾರಿನಲ್ಲಿ ಬಂದು, ಬಿಲಾಲ್ ರನ್ನು ಕಾರಿನಲ್ಲಿ ಬಿಡುತ್ತೇವೆ ಎಂದು ತಿಳಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿರುತ್ತಾರೆ.
ಕಾರಿನಲ್ಲಿ ಪ್ರಯಾಣಿಸುವ ವೇಳೆ ಸೆಲೂನ್ ಮಾಲಿಕರು ಸೆಲೂನ್ ಗೆ ಹೆಚ್ಚಿನ ಬಾಡಿಗೆಯನ್ನು ಕೊಡಬೇಕೆಂದು ಬಿಲಾಲ್ ಬಳಿ ತಕರಾರು ತೆಗೆದಿದ್ದು, ಬಿಲಾಲ್ ಒಪ್ಪದಿದಾಗ ಕಾರಿನಲ್ಲಿದ್ದವರೆಲ್ಲಾ ಸೇರಿ ಹಲ್ಲೆ ನಡೆಸಿರುತ್ತಾರೆ. ಬಳಿಕ ಬಿಲಾಲ್ ರವರ ಪರ್ಸ್ ಹಾಗೂ ಅದರಲ್ಲಿದ್ದ 7500 ರೂ ಮತ್ತು ದಾಖಲಾತಿಗಳನ್ನು ಕಸಿದುಕೊಂಡು, ಜೀವಬೆದರಿಕೆ ಹಾಕಿ ಅವರನ್ನು ವಿಟ್ಲ ಮಂಗಿಲಪದವು ಎಂಬಲ್ಲಿ ಇಳಿಸಿ ತೆರಳಿರುತ್ತಾರೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 95-2023 ಕಲಂ: 365, 342, 323, 392, 506 R/w 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ..