ವಿಟ್ಲ : ವ್ಯಕ್ತಿಯೋರ್ವರು ಹೃದಯಾಘಾತದಿಂದ ನಿಧನರಾದ ಘಟನೆ ಕೇಪು ಗ್ರಾಮದ ಅಡ್ಯನಡ್ಕದ ಕಂಚಿಮೂಲೆಯಲ್ಲಿ ನಡೆದಿದೆ.
ಅಡ್ಯನಡ್ಕದಲ್ಲಿ ಅಂಗಡಿ ಹೊಂದಿದ್ದ ಶಿವಪ್ಪ ನಾಯ್ಕ್ (57) ಮೃತರು.

ಶಿವಪ್ಪ ನಾಯ್ಕ್ ರವರು ಅಡ್ಯನಡ್ಕ ಜಂಕ್ಷನ್ ನಲ್ಲಿ ಸುಮಾರು 30ಕ್ಕಿಂತಲೂ ಹೆಚ್ಚು ವರುಷಗಳ ಕಾಲ ಅಂಗಡಿಯನ್ನಿಟ್ಟು ಕಾರ್ಯ ನಿರ್ವಹಿಸುತ್ತಿದ್ದು, ‘ಶಿವಪ್ಪಣ್ಣ’ ಎಂದೇ ಖ್ಯಾತರಾಗಿದ್ದರು.
ತಮ್ಮ ಸರಳ-ಸಜ್ಜನಿಕೆಯ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.