ದಕ್ಷಿಣ ಕನ್ನಡ : ಜಿಲ್ಲೆಯಲ್ಲಿ ಇತ್ತೀಚೆಗೆ ತೆಗೆದುಕೊಂಡ ನಿರ್ಣಯದಂತೆ ಮೇ 15 ರ ನಂತರ ಮದುವೆ ಸಮಾರಂಭಗಳನ್ನು ನಡೆಸಬಾರದೆಂದು ಜಿಲ್ಲೆಯ ಜನತೆಗೆ ವಿನಂತಿ ಮಾಡಲಾಗಿತ್ತು.
ಆದರೆ ಈಗಾಗಲೇ ಮದುವೆಗೆ ದಿನ ನಿಗದಿಗೊಳಿಸಿದ್ದೆವೆ, ಎಲ್ಲಾ ಪೂರ್ವಸಿದ್ಧತೆ ಮಾಡಿಕೊಂಡಿದ್ದು, ನಿಲುವು ಪುನರ ವಿಮರ್ಶಿಸಲು ಸಾರ್ವಜನಿಕವಾಗಿ ಬಂದ ಮನವಿಯ ಹಿನ್ನಲೆಯಲ್ಲಿ ಮೇ15 ರ ನಂತರವೂ 25 ಜನರಿಗೆ ಸೀಮಿತಗೊಳಿಸಿ ವಿವಾಹ ಕಾರ್ಯಕ್ರಮಕ್ಕೆ ಅವಕಾಶ ನೀಡಲು ದ.ಕ ಜಿಲ್ಲಾಡಳಿತ ಆದೇಶಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯ ಪ್ರಕಟಣೆ ತಿಳಿಸಿದೆ.