ಪುತ್ತೂರು: ಸುದೀರ್ಘ ನಾಲ್ಕೂವರೆ ವರ್ಷ ಪುತ್ತೂರು ನಗರಸಭೆಯಲ್ಲಿ ಪೌರಾಯುಕ್ತರಾಗಿರುವ ರೂಪಾ ಶೆಟ್ಟಿಯವರಿಗೆ ಕಾರ್ಕಳದ ಪುರಸಭೆಗೆ ಮುಖ್ಯಾಧಿಕಾರಿಯಾಗಿ ವರ್ಗಾವಣೆ ಆದೇಶ ಬಂದಿದ್ದು, ಪುತ್ತೂರಿಗೆ ಚಿಕ್ಕಮಗಳೂರು ನಗರಸಭೆ ಪೌರಾಯುಕ್ತ ಮಧುಮನೋಹರ್ ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
2016ರಲ್ಲಿ ಆಗಸ್ಟ್ 27ರಂದು ಪುತ್ತೂರಿಗೆ ವರ್ಗಾವಣೆಗೊಂಡಿದ್ದ ರೂಪಾ ಶೆಟ್ಟಿಯವರು ಸುಧೀರ್ಘ ನಾಲ್ಕೂವರೆ ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ಈ ಹಿಂದೆ
ಪುರಸಭೆಯಾಗಿದ್ದ ಸಂದರ್ಭದಲ್ಲಿ 1991ರಲ್ಲಿ ರಮೇಶ್ ಪಿ.ಜಿ ಎಂಬವರು ನಾಲ್ಕು ವರ್ಷ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಬಳಿಕ ಅವರಿಂದಲೂ 7
ತಿಂಗಳು ಹೆಚ್ಚಿಗೆ ಕರ್ತವ್ಯ ನಿರ್ವಹಿಸಿದ ಕೀರ್ತಿ ರೂಪಾ ಶೆಟ್ಟಿಯವರದ್ದಾಗಿದೆ.
ಮೂಲತಃ ಮಂಗಳೂರಿನವರಾಗಿರುವ ಇವರು ಆರಂಭದಲ್ಲಿ 15, ವರ್ಷ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಉಳ್ಳಾಲ ಪುರಸಭೆಗೆ ಮುಖ್ಯಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು. ಅಲ್ಲಿಂದ ಪುತ್ತೂರಿಗೆ ವರ್ಗಾವಣೆಗೊಂಡಿದ್ದರು. ಇದೀಗ ಕಾರ್ಕಳ ಪುರಸಭೆಗೆ ಮುಖ್ಯಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.