ಮಂಗಳೂರು : ಕೊರೊನಾ ಎರಡನೇ ಅಲೆಯು ರಾಜ್ಯದಲ್ಲಿ ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಂಟೈನ್‌ಮೆಂಟ್ ಝೋನ್‌ಗಳ ಸಂಖ್ಯೆಯೂ ಕೂಡಾ ಜಿಲ್ಲೆಯಲ್ಲಿ ಅಧಿಕವಾಗುತ್ತಿದೆ.
ನಾಲ್ಕು ದಿನಗಳಲ್ಲಿ, ಜಿಲ್ಲೆಯಲ್ಲಿ ಕಂಟೈನ್‌ಮೆಂಟ್ ಝೋನ್‌ಗಳ ಸಂಖ್ಯೆ 50 ರಿಂದ 132 ಕ್ಕೆ ಏರಿಕೆಯಾಗಿದೆ. ಮೇ 14 ರಂದು 15 ಪ್ರದೇಶಗಳನ್ನು ಕಂಟೈನ್‌ಮೆಂಟ್ ಝೋನ್‌ಗಳೆಂದು ಘೋಷಿಸಲಾಗಿದೆ.
ಮಂಗಳೂರಿನಲ್ಲಿ 56, ಬೆಳ್ತಂಗಡಿಯಲ್ಲಿ 21, ಸುಳ್ಯದಲ್ಲಿ 10 ಮತ್ತು ಪುತ್ತೂರಿನಲ್ಲಿ 7 ಪ್ರದೇಶಗಳನ್ನು ಕಂಟೈನ್‌ಮೆಂಟ್ ಝೋನ್‌ಗಳಾಗಿ ಗುರುತಿಸಲಾಗಿದೆ.ಕೊರೊನಾ 26 ಹೊಸ ಪ್ರಕರಣಗಳು ಬೆಳ್ತಂಗಡಿ ತಾಲೂಕಿನ ಕಲ್ಲಗುಡ್ಡದಲ್ಲಿ ವರದಿಯಾಗಿವೆ.
ದಕ್ಷಿಣ ಕನ್ನಡದ ನೋಡಲ್ ಅಧಿಕಾರಿ ಡಾ.ಅಶೋಕ್ ಮಾತನಾಡಿ, ”ಏಪ್ರಿಲ್ ಮಧ್ಯದಿಂದ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ” ಎಂದು ಹೇಳಿದ್ದಾರೆ.ಇನ್ನು ಇದೇ ವೇಳೆ ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ವಾಸಿಸುವ ಜನರ ಅಗತ್ಯ ಸೇವೆಗಳು ಪೂರೈಸುವ ಬಗ್ಗೆ ಹೆಚ್ಚಿ ಗಮನ ಹರಿಸಲು ಜಿಲ್ಲಾ ಆರೋಗ್ಯ ಇಲಾಖೆಯು ನಗರ ಪಾಲಿಕೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಿದೆ.
ಆಶಾ ಮತ್ತು ಎಂಪಿಡಬ್ಲ್ಯೂ ಕಾರ್ಯಕರ್ತರಿಗೆ ಪ್ರತಿದಿನ ಪಾಸಿಟಿವ್ ಪ್ರಕರಣಗಳ ಬಗ್ಗೆ ನಿಗಾ ಇಡಲು ಮತ್ತು ಮೇಲ್ವಿಚಾರಣೆ ನಡೆಸಲು ನಿರ್ದೇಶನಗಳನ್ನು ನೀಡಲಾಗಿದೆ. ಹಾಗೆಯೇ ಅವರಿಗೆ ಸೋಂಕಿತ ಜನರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ವಿವರ ನೀಡಿ ನಿಗಾ ಇರಿಸಲು ಸೂಚಿಸಲಾಗಿದೆ ಎಂದರು.