ಮುಂಡೂರು : ಮುಂಡೂರು ಗ್ರಾಮದ ನಡುಗುಡ್ಡೆ ಎಂಬಲ್ಲಿ ದಿ.ಸರಸ್ವತಿ ನಾಯ್ಕ್ ರವರ ವಾಸವಿದ್ದ ಮನೆ ಇಂದು ಸುರಿದ ಭಾರಿ ಮಳೆಗೆ ಕುಸಿದಿದ್ದು, ಪಕ್ಕಾಸು, ರೀಪು, ಹಂಚುಗಳು ಭೂಮಿ ಪಾಲಾಗಿದೆ, ತಕ್ಷಣ ಧಾವಿಸಿ ಬಂದ ಪಂಚಾಯತ್ ಅಧ್ಯಕ್ಷ ರಾದ ಪುಷ್ಪ ಗೌಡ ಮೇಲಧಿಕಾರಿಗಳಿಗೆ ಕರೆ ಮಾಡಿ ತಕ್ಷಣ ಕಾರ್ಯ ಪ್ರವೃತ್ತರಾಗುವಂತೆ ಹಾಗು ತಹಶೀಲ್ದಾರ್ ರವರಿಗೆ ಇಂಜಿನಿಯರ್ ರವರನ್ನು ಕರೆಸಿ ಸೂಕ್ತ ಪರಿಹಾರ ಕೊಡಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ. ಅರುಣಾ ಕಣ್ಣರ್ನೂಜಿ. ಊರಿನ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಜನಾರ್ಧನ ಪೂಜಾರಿ, ಅನಿಲ್ ಕಣ್ಣರ್ನೂಜಿ. ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯ್ಕ್.ಸುಂದರ ಬಿಕೆ, ಧನಂಜಯ. ಯೋಗೀಶ್. ಹೆನ್ರಿ. ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಆ ಮನೆಯಲ್ಲಿ ಸರಸ್ವತಿ ಯವರ ಮಕ್ಕಳು ಹಾಗು ಒಂದು ಅಂಗವಿಕಲ ಮಗು ಇರುತ್ತಿದ್ದೂ ಕುಸಿದ ಸಂದರ್ಭದಲ್ಲಿ ಅವರೆಲ್ಲರೂ ಮನೆಯ ಹೊರಗಿನ ಕೊಟ್ಟಿಗೆ ಯಲ್ಲಿ ಇದ್ದರು. ಇದರಿಂದಾಗಿ ಪವಾಡ ಎಂಬಂತೆ ಬದುಕಿ ಉಳಿದ್ದಿದಾರೆ. ಸುಮಾರು 1ಲಕ್ಷ ನಷ್ಟ ಸಂಭವಿಸಿದೆ. ದಿನ ಕೂಲಿ ಮಾಡುವ ಮತ್ತು ಅಂಗವಿಕಲ ಮಗು ಇರುವ ಈ ಸಂಸಾರಕ್ಕೆ ಸರ್ಕಾರದ ಸಹಾಯ ಬೇಕಾಗಿದೆ.
ಕುಸಿದ ಮನೆಯ ಉಳಿದ ಹಂಚು ತೆಗೆದು ತಾತ್ಕಾಲಿಕವಾಗಿ ಜನಾರ್ಧನ ಅವರು ನೀಡಿದ ಪ್ಲಾಸ್ಟಿಕ್ ಹಾಕಿ ನೀರು ಸೊರದಂತೆ ಮಾಡಲಾಯಿತು. ಈ ಎಲ್ಲಾ ಕೆಲಸ ಕಾರ್ಯವನ್ನು ಶ್ರೀರಾಮ ಗೆಳೆಯರ ಬಳಗದ ಸದಸ್ಯರು ಮಾಡಿದ್ದು, ತಕ್ಷಣ ಧಾವಿಸಿ ಕೆಲಸ ನಿರ್ವಹಿಸಿದ ಶ್ರೀರಾಮ ಗೆಳೆಯರ ಬಳಗದ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.