ಮಂಗಳೂರು : ಚಂಡ ಮಾರುತದಿಂದ ಪ್ರಕ್ಷುಬ್ಧಗೊಂಡಿರುವ ಕಡಲಿನಲ್ಲಿ ದುರ್ಘಟನೆಯೊಂದು ನಡೆದು ಹೋಗಿದೆ. ಅಲಾಯನ್ಸ್ ಹೆಸರಿನ ಹಡಗು ಸಮುದ್ರದಲ್ಲಿ ಮುಗುಚಿಬಿದ್ದು 6 ಮಂದಿ ಕಣ್ಮರೆಯಾಗಿರುವ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ನಿಂದ 17 ನಾಟೆಕಲ್ ದೂರದಲ್ಲಿ ದುರ್ಘಟನೆ ನಡೆದಿದೆ.
ಕಣ್ಮರೆಯಾಗಿರುವ ಜನರಿಗಾಗಿ ಆಳ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಹುಡುಕಾಟ ನಡೆಸುತ್ತಿದೆ. ಇನ್ನು ಬೋಟ್ನಲ್ಲಿದ್ದ ಇಬ್ಬರು ಬರೋಬ್ಬರಿ 8 ಕಿಲೋ ಮೀಟರ್ ಈಜಿ ಜೀವವನ್ನ ಉಳಿಸಿಕೊಂಡಿದ್ದಾರೆ.ಇನ್ನು ಒಬ್ಬರು ಸಾವನ್ನಪ್ಪಿದ್ದು ಮೃತದೇಹ ಪತ್ತೆಯಾಗಿದೆ.
ಎಂಆರ್ ಪಿಎಲ್ ಕಚ್ಛಾ ತೈಲ ಹಡಗಿನ ಪೈಪ್ ಲೈನ್ ನಿರ್ವಹಣೆ ಮಾಡುತ್ತಿದ್ದ ಬೋಟ್ ಇದಾಗಿದೆ. ಮಂಗಳೂರಿನ ತೈಲ ಶುದ್ದೀಕರಣ ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ಬೋಟ್ ಕಾರ್ಯ ನಿರ್ವಹಿಸುತ್ತಿತ್ತು. ಎಂಆರ್ಪಿಎಲ್ಗೆ ತೈಲ ಹೊತ್ತು ತರುವ ಹಡಗಿನಲ್ಲಿ ನಿನ್ನೆ ಸಂಜೆ 9 ಕಾರ್ಮಿಕರು ಆಳ ಸಮುದ್ರಕ್ಕೆ ತೆರಳಿದ್ದರು. ಅದರಲ್ಲಿ ಇಬ್ಬರು ಈಜಿ ದಡ ಸೇರಿದ್ದು ಒಬ್ಬರೂ ಸಾವನ್ನಪ್ಪಿದ್ದು, ಇನ್ನೂ 6 ಜನರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಚಂಡಮಾರುತದ ಎಚ್ಚರಿಕೆ ಇದ್ದರೂ ಆಳ ಸಮುದ್ರಕ್ಕೆ ಬೋಟ್ ತೆರಳಿತ್ತು.