ಉಡುಪಿ : ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ ಕೇಸ್ಗೆ ಸಂಬಂಧಿಸಿದಂತೆ ಫೇಸ್ಬುಕ್ನಲ್ಲಿ ಪ್ರಚೋದನಕಾರಿ ಪೋಸ್ಟ್ ಶೇರ್ ಮಾಡಿದ ವ್ಯಕ್ತಿ ವಿರುದ್ಧ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಶಿವಮೊಗ್ಗ ಮೂಲದ ಹಫೀಜ್ ಮೊಹಮದ್ ವಿರುದ್ಧ ಉಡುಪಿಯ ಟೌನ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.
ಈ ವ್ಯಕ್ತಿಯು ತನ್ನ ಫೇಸ್ಬುಕ್ ಅಕೌಂಟ್ನಲ್ಲಿ, ಪ್ರಿಪರೇಷನ್ ಇಲ್ಲದೆ ಪ್ರವೀಣ್ ಚೌಗಲೆಯನ್ನು ಕೊಲ್ಲುವ ಒಂದು ಸುಲಭದ ದಾರಿಯನ್ನು ನೇಜಾರಿನವರು ಕಳೆದುಕೊಂಡಿದ್ದಾರೆ ಎಂದು ಬರೆದು ಶೇರ್ ಮಾಡಿದ್ದಾನೆ. ಅಲ್ಲದೇ ರಕ್ತದ ಪ್ರತಿಯೊಂದು ಹನಿಯು ಶಹಾದತಿಗೆ ಅರ್ಪಿಸುವ ಖುದ್ಸಿನ ಮಕ್ಕಳಿಗಾಗಿ ಎಂದು ತನ್ನ ಫೇಸ್ಬುಕ್ನ ಟ್ಯಾಗ್ನಲ್ಲಿ ಬರೆದಿದ್ದಾನೆ.
ನೇಜಾರಿನ ನಾಲ್ವರು ಕೊಲೆಗೆ ಸಂಬಂಧಿಸಿದಂತೆ ಆರೋಪಿಯು ಪೋಸ್ಟ್ ಮಾಡಿರುವುದು ಪ್ರಚೋದನಾಕಾರಿ ಹೇಳಿಕೆಯಂತೆ ಇದೆ. ಹೀಗಾಗಿ ಅಪರಾಧ ಕೃತ್ಯಕ್ಕೆ ಪ್ರಚೋದನೆ, ಸಾರ್ವಜನಿಕವಾಗಿ ಶಾಂತಿ ಕದಡುವ ಸಂಬಂಧ ಫೇಸ್ಬುಕ್ನಲ್ಲಿ ಪೋಸ್ಟ್ ಶೇರ್ ಮಾಡಿದ ಹಿನ್ನೆಲೆಯಲ್ಲಿ ಟೌನ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲು ಮಾಡಲಾಗಿದೆ.
ಐಪಿಸಿ ಸೆಕ್ಷನ್ 155, 505(2) ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.