ಉಪ್ಪಿನಂಗಡಿ: ಇಲ್ಲಿನ ಆರಕ್ಷಕ ಠಾಣೆಗೆ ಎಎಸೈ ಯಾಗಿ
ವಿಜಯೇಂದ್ರ ಬಿ. ಅವರು ಪದೋನ್ನತಿಗೊಂಡು ಕರ್ತವ್ಯಕ್ಕೆ
ಹಾಜರಾಗಿದ್ದಾರೆ.
ವೇಣೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದ ಇವರು ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿ ಪದೋನ್ನತಿಗೊಂಡು ಉಪ್ಪಿನಂಗಡಿ ಠಾಣೆಗೆ
ವರ್ಗಾವಣೆಗೊಂಡಿದ್ದಾರೆ.
ಮೂಲತಃ ಬೆಳ್ತಂಗಡಿಯ ನಿವಾಸಿಯಾಗಿರುವ ಇವರು 1993 ರಲ್ಲಿ ಪೊಲೀಸ್ ಇಲಾಖೆಗೆ ಕಾನ್‌ಸ್ಟೆಬಲ್ ಆಗಿ ಸೇರ್ಪಡೆಗೊಂಡಿದ್ದರು. ಮಂಗಳೂರು, ಉಳ್ಳಾಲ,
ಉಪ್ಪಿನಂಗಡಿ , ಬಂಟ್ವಾಳ, ವೇಣೂರು ಠಾಣೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.