ಮಂಗಳೂರು : ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲ್ಲ ಎಂದು ಕರ್ನಾಟಕ ಸರ್ಕಾರ ಘೋಷಣೆಗೆ ಬಿಜೆಪಿ ಮುಖಂಡ ಕ್ಯಾಪ್ಟನ್ ಬ್ರಿಜೇಶ್ ಚೌಟ ಯುವ ಸಮುದಾಯದ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ ಎಂದು ಸರಕಾರಕ್ಕೆ ಹೇಳಿದ್ದಾರೆ.
ಕರ್ನಾಟಕ ಸರಕಾರವು ಎನ್‌ಇಪಿ ರದ್ದತಿ ಮೂಲಕ ರಾಜಕೀಯ ಗುರಿಗಳನ್ನು ಸಾಧಿಸಲು ಹೊರಟಿದೆ. ಎನ್‌ಇಪಿ ರಾಜಕೀಯ ದಾಖಲೆ ಅಲ್ಲ ಹೊರತು ಶಿಕ್ಷಣ ತಜ್ಞರು ರೂಪಿಸಿರುವ ಅಮೂಲ್ಯವಾದ ನೀತಿ. ಕರ್ನಾಟಕ ಸರಕಾರವು ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಮಾಡಲು ಯತ್ನಿಸುತ್ತಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗಾಗಿ ರಾಜ್ಯಾದ್ಯಂತ ನವೆಂಬರ್ 30 ರವರೆಗೆ ನಡೆಯಲಿರುವ ಎನ್‌ಇಪಿ ಬೇಕು ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಳ್ಳಲು ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.