ಬಂಟ್ವಾಳ : ತಾಲೂಕಿನ ಬಾಳ್ತಿಲ ಗ್ರಾಮದ ದಾಸಕೋಡಿ ಅಂಗನವಾಡಿ ಕೇಂದ್ರದ ಮಕ್ಕಳ ದಿನಾಚರಣೆ ಮತ್ತು ವಿವಿಧ ಸ್ತ್ರೀ ಶಕ್ತಿ ಗುಂಪುಗಳ ಪ್ರತಿಭಾ ದಿನೋತ್ಸವ ಕಾರ್ಯಕ್ರಮ ಬಾಳ್ತಿಲ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಅಂಗನವಾಡಿಯ ಪುಟಾಣಿ ಚಾರ್ವಿಯ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷರಾದ ಬಿ.ಕೆ. ಅಣ್ಣು ಪೂಜಾರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ನೆಹರು ಟೋಪಿ ಧರಿಸಿ, ಶಾಲು ಹೊಂದಿಸಿ ಮಕ್ಕಳನ್ನು ಗೌರವಿಸಲಾಯಿತು. ಸ್ತ್ರೀ ಶಕ್ತಿ ಗುಂಪಿನವರು ತಯಾರಿಸಿದ ಕೈಚೀಲವನ್ನು ಅನಾವರಣಗೊಳಿಸಲಾಯಿತು. ಅಂಗನವಾಡಿ ಮಕ್ಕಳಾದ ವಂಶಿತ್, ಆಯುರ್, ಸನ್ನಿಧಿ, ಹನೀಪಾ ಫಾತಿಮಾ ರವರ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಯಿತು.

ಮಕ್ಕಳಿಂದ, ಮಕ್ಕಳ ಹೆತ್ತವರಿಂದ, ಹಾಗೂ ಸ್ತ್ರೀಶಕ್ತಿ ಗುಂಪಿನ ವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ರಾಧಾಕೃಷ್ಣ ಅಡ್ಯಂತಾಯ, ನಿತ್ಯಾನಂದ ಪ್ರಭು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲೀಲಾವತಿ, ಪಂಚಾಯತ್ ಉಪಾಧ್ಯಕ್ಷರಾದ ರಂಜಿನಿ, ಸವಿತಾ ಗೋಪಾಲ್, ಕಲಾವತಿ ಭಟ್, ಕವಿತಾ ಅಡ್ಯಂತಾಯ, ಜಯಲಕ್ಷ್ಮಿ, ಶುಭಶ್ರೀ, ಆರೋಗ್ಯ ಕಾರ್ಯಕರ್ತೆ ಸರಸ್ವತಿ ಉಪಸ್ಥಿತರಿದ್ದರು.

ಚಂದ್ರಶೇಖರ್, ಲಲಿತಾ ಜಿ, ಯಶೋಧ ಹಾಜರಿದ್ದ ಕಾರ್ಯಕ್ರಮದಲ್ಲಿ ನಯನ ಸ್ವಾಗತಿಸಿ, ಸೌಮ್ಯ ವಂದಿಸಿದರು. ಅಮಿತಾ ಮತ್ತು ಪ್ರಜ್ಞಾ ಕಾರ್ಯಕ್ರಮ ನಿರ್ವಹಿಸಿದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.