ವಿಟ್ಲ : ಸರಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಎ) ಇದರ ವಾರ್ಷಿಕೋತ್ಸವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ರವಿಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ, ಬೆಂಗಳೂರು ಆರ್ ಐ ಇ ಶೈಕ್ಷಣಿಕ ಮುಖ್ಯಸ್ಥ ಡಾ. ರವಿನಾರಾಯಣ್ ಸಿ, ಮಂಗಳೂರು ವೆನ್ಲಾಕ್ ಆಸ್ಪತ್ರೆ ಚರ್ಮರೋಗ ತಜ್ಞ ಡಾ. ಸುಬೋದ್ ಕುಮಾರ್ ರೈ, ವಿಟ್ಲ ಶ್ರೀ ಭಾರತೀ ಜನಾರ್ದನ ಸೇವಾ ಟ್ರಸ್ಟ್ ಕಾರ್ಯದರ್ಶಿ ಸುಬ್ರಾಯ ಪೈ ಭಾಗವಹಿಸಿದ್ದರು.
ಪಟ್ಟಣ ಪಂಚಾಯತ್ ಸದಸ್ಯ ಅಶ್ರಫ್ ಕೆ ಎಂ, ಬಿ ಆರ್ ಸಿ ರಾಘವೇಂದ್ರ ಬಲ್ಲಾಳ್, ಎಸ್ ಡಿ ಎಂ ಸಿ ಅಧ್ಯಕ್ಷೆ ಶಾರದ, ವಿದ್ಯಾರ್ಥಿ ನಾಯಕರುಗಳಾದ ಚಿನ್ಮಯ್ ಮತ್ತು ಮನಸ್ವಿ ಆರ್ ಕೆ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಬಾಲಬಂಧು ಪತ್ರಿಕೆ ಬಿಡುಗಡೆ, ರಿಶಿತ್ ರಾಜ್, ತ್ರಿಶಾ ಪಿ ಮತ್ತು ಕಬಡ್ಡಿ ತಂಡವನ್ನು ಗೌರವಿಸಲಾಯಿತು.
ಎಸ್ ಡಿ ಎಂ ಸಿ ಅಧ್ಯಕ್ಷ ರವಿಶಂಕರ್ ಶಾಸ್ತ್ರಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ರಾಜೇಶ್ ವಂದಿಸಿದರು. ಮುಖ್ಯ ಶಿಕ್ಷಕಿಯರಾದ ಅನ್ನಪೂರ್ಣ ಮತ್ತು ವಾರಿಜ. ಕುಮಾರಿ ವರದಿ ವಾಚಿಸಿದರು. ವಿನೋದ ನಿರೂಪಿಸಿದರು. ಶ್ರೀಮತಿ, ದಯಾನಂದ, ಜಗದೀಶ್ ಮತ್ತು ಶಾರದ ಸಹಕರಿಸಿದರು.