ವಿಟ್ಲ : ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಳ್ನಾಡು ನಿವಾಸಿ ಮೊಹಮ್ಮದ್ ಆರೀಸ್ ನೀಡಿದ ದೂರಿನ ಮೇರೆಗೆ ಉಬೈದುಲ್ಲಾ ಹಾಗೂ ಅತಾವುಲ್ಲ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮೊಹಮ್ಮದ್ ಆರೀಸ್ ರವರು ಡಿ.1 ರಂದು ಸಂಜೆ ಸಾಲೆತ್ತೂರು ರಿಕ್ಷಾ ಪಾರ್ಕ್ ನಿಂದ ಅಟೋರಿಕ್ಷಾದಲ್ಲಿ ತೆರಳುತ್ತಾ, ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸಾಲೆತ್ತೂರು ಜಂಕ್ಷನ್ ಬಳಿ ತಲುಪಿದಾಗ ಪರಿಚಯದ ಉಬೈದುಲ್ಲಾ ಹಾಗೂ ಅತಾವುಲ್ಲಾರವರು ಏಕಾಏಕಿಯಾಗಿ ಬಂದು ಆಟೋರಿಕ್ಷಾವನ್ನು ತಡೆದು ನಿಲ್ಲಿಸಿ, ಆಟೋರಿಕ್ಷಾದಿಂದ ಹೊರಗಡೆ ಎಳೆದು ಅವ್ಯಾಚವಾಗಿ ಬೈದು, ಜೀವ ಬೆದರಿಕೆ ಒಡ್ಡಿ, ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 202/2023 ಕಲಂ: 341,504,323,324,506 R/w 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.