ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ತೇಜಸ್ ಯುದ್ಧ ವಿಮಾನದ ರಫ್ತು ಕುರಿತಂತೆ ನೈಜೀರಿಯಾ ಸೇರಿದಂತೆ ಮೂರು ರಾಷ್ಟ್ರಗಳ ಜೊತೆಗೆ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಮಾತುಕತೆ ನಡೆಸಿದೆ.
ಈ ವಿಮಾನಗಳನ್ನು ಖರೀದಿಸಲು ನೈಜೀರಿಯಾ, ಫಿಲಿಪೈನ್ಸ್, ಅರ್ಜೆಂಟೀನಾ, ಈಜಿಪ್ಟ್ ದೇಶಗಳು ಮುಂದಾಗಿವೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಅಧ್ಯಕ್ಷ ಸಿಬಿ ಅನಂತಕೃಷ್ಣನ್ ತಿಳಿಸಿದ್ದಾರೆ. ನೈಜೀರಿಯಾ ಜೊತೆಗಿನ ಚರ್ಚೆಯು ಈಗ ಆರಂಭಿಕ ಹಂತದಲ್ಲಿದೆ.
ಈಜಿಪ್ಟ್ ಮತ್ತು ಅರ್ಜೆಂಟೀನಾ ಜೊತೆಗೆ ಮಾತುಕತೆ ನಡೆದಿದೆ ಅಂತಾ ಮಾಹಿತಿ ನೀಡಿದ್ದಾರೆ. ಆರಂಭಿಕವಾಗಿ ಅರ್ಜೆಂಟೀನಾಗೆ 15, ಈಜಿಪ್ಟ್‌ಗೆ 20 ಯುದ್ಧ ವಿಮಾನ ಮಾರುವ ಗುರಿಯಿದೆ. ಉಳಿದಂತೆ ಅಮೆರಿಕ, ಆಸ್ಟ್ರೇಲಿಯಾ, ಇಂಡೊನೇಷಿಯಾ, ಫಿಲಿಪ್ಪೀನ್ಸ್ ಕೂಡಾ ತೇಜಸ್ ಯುದ್ಧ ವಿಮಾನ ಖರೀದಿಗೆ ಆಸಕ್ತಿ ತೋರಿವೆ ಅಂತಾ ಎಚ್‌ಎಎಲ್ ಅಧ್ಯಕ್ಷ ಸಿ.ಇ.ಅನಂತಕೃಷ್ಣನ್ ತಿಳಿಸಿದ್ದಾರೆ.



























