ಖ್ಯಾತ ದುಬೈ ಉದ್ಯಮಿ ಹಾಗೂ ಕನ್ನಡ-ತುಳು ಚಿತ್ರಗಳ ಸದಭಿರುಚಿಯ ನಿರ್ಮಾಪಕರೆಂದೇ ಖ್ಯಾತರಾದ ಹರೀಶ್ ಶೇರಿಗಾರ್ ರವರು ತುಳು-ಕನ್ನಡ ಚಿತ್ರರಂಗದ ಒಡನಾಡಿ ವಿಕ್ರಮ್ ರಾವ್ ನಿರ್ಮಾಣದ ಹಾಗೂ ರಕ್ಷಿತ್ ಚಿನ್ನು ನಿರ್ದೇಶನದ, ರಂಗನಟ ಅಶ್ವಥ್ ಬಗಂಬಿಲ ನಟಿಸಿರುವ ಬಹುನಿರೀಕ್ಷಿತ “ಖಡಕ್ಕ್ ಚಾಯ್ ” ಕಿರುಚಿತ್ರದ ಆಫೀಶಿಯಲ್ ಪೋಸ್ಟರ್ ಬಿಡುಗಡೆ ಮತ್ತು ಕಿರುಚಿತ್ರ ಬಿಡುಗಡೆ ದಿನಾಂಕ ಅನಾವರಣಗೊಂಡಿದ್ದು, ಮೇ.21 ರಂದು ಈ ಕಿರುಚಿತ್ರ ಬಿಡುಗಡೆಗೊಳ್ಳಲಿದೆ.