ಬಂಟ್ವಾಳ : ಕೊರೊನಾ ಹಿನ್ನೆಲೆಯಲ್ಲಿ ರಾತ್ರಿ, ಹಗಲು ಎನ್ನದೇ ಕರ್ತವ್ಯ ನಿರ್ವಹಿಸುವ ಪೊಲೀಸರು ಮತ್ತು ಬೀದಿ ಬದಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಅಗತ್ಯವುಳ್ಳವರಿಗೆ ಊಟದ ವ್ಯವಸ್ಥೆಯನ್ನು ಬಂಟ್ವಾಳದ ಜೆ.ಡಿ.ಬಾಯ್ಸ್ ತಂಡ ಮಾಡಿತು.
ಬಿ.ಸಿ.ರೋಡ್ ನಿಂದ ಮಂಗಳೂರಿನವರೆಗೆ ಸುಮಾರು 500ಕ್ಕೂ ಅಧಿಕ ಮಂದಿಗೆ ಊಟವನ್ನು ತಂಡವೂ ವಿತರಿಸಿತು. ಕರ್ತವ್ಯದಲ್ಲಿನ ಪೊಲೀಸ್ ಸಿಬ್ಬಂದಿಗಳಿಗೆ, ಬೀದಿ ಬದಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಊಟವನ್ನು ನೀಡಲಾಯಿತು.