ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ(ರಿ) ಸಮಿತಿಯಿಂದ ಕೋವಿಡ್ -19 ನಿರ್ಮೂಲನೆಗಾಗಿ ಪುತ್ತೂರಿನಾದ್ಯಂತ ನಿರಂತರ ಸೇವೆ ನೀಡುತ್ತಿರುವ ಶಾಸಕರ ವಾರ್ ರೂಮ್ ಗೆ ಮಾಸ್ಕ್ ಮತ್ತು ಗ್ಲೌಸ್ ನ್ನು ದಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷರಾದ ಅಶೋಕ್ ನಾಯ್ಕ ಕೆದಿಲ ರವರು ಶಾಸಕ ಸಂಜೀವ ಮಠಂದೂರು ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತಾ.ಪ ಅಧ್ಯಕ್ಷರಾದ ರಾಧಕೃಷ್ಣ ಬೋರ್ಕರ್, ಸಮಿತಿಯ ಪದಾಧಿಕಾರಿಗಳಾದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುರಂದರ ನಾಯ್ಕ,ವಿನಯ್ ನಾಯ್ಕ ಸಂಪ್ಯ, ಸಾವಿತ್ರಿ ನಾಯ್ಕ, ವಿಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.