ಮಾಣಿ: ಲಕ್ಕಪ್ಪಕೋಡಿ- ಅರ್ಬಿ ಪಂಚಾಯತ್ ರಸ್ತೆಯು ಮಳೆಗಾಲದ ಮುಂಚೆಯೇ ತೀರಾ ಹದೆಗೆಟ್ಟಿದ್ದು ಜನರಿಗೆ ನಡೆದಾಡಲು, ಹಾಗೂ ವಾಹನಗಳ ಸಂಚಾರಕ್ಕೆ ಬಹಳ ಕಷ್ಟಕರವಾಗಿ ಪರಿಣಮಿಸಿದೆ ಎಂದು ವರದಿಯಾಗಿದೆ.
ರಸ್ತೆಯು ಸಂಪೂರ್ಣ ಕೆಸರಿನಿಂದ ತುಂಬಿ ಹೋಗಿದ್ದು, ಮಳೆ ನೀರು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ಹರಿಯುವುದೇ ಪ್ರಮುಖ ಕಾರಣ ಎಂದು ತಿಳಿದುಬರುತ್ತದೆ. ಈ ಪ್ರದೇಶದಲ್ಲಿ ಸುಮಾರು 15ಕ್ಕಿಂತಲೂ ಹೆಚ್ಚಿನ ಮನೆಗಳಿದ್ದು ಮಳೆಗಾಲದಲ್ಲಿ ಇಲ್ಲಿನ ಅನಾರೋಗ್ಯ ಪೀಡಿತರಿಗೆ ,ಹಿರಿಯ ನಾಗರಿಕರಿಗೆ ಮಕ್ಕಳಿಗೆ ಈ ರಸ್ತೆಯನ್ನು ನಿರಾತಂಕವಾಗಿ ಬಳಸಲು ಸಾದ್ಯವಾಗುತ್ತಿಲ್ಲ. ಸರಿಕಟ್ಟಾಗಿ ವಾಹನಗಳು ಈ ರಸ್ತೆಗೆ ಬರಲು ಕೇಳುವುದಿಲ್ಲ.ಅಗತ್ಯ ಸಾಮಾಗ್ರಿಗಳನ್ನು, ಗ್ಯಾಸ್ ಸಿಲಿಂಡರ್ ಗಳನ್ನು ಇಲ್ಲಿನ ನಿವಾಸಿಗಳು ತಲೆ ಹೊರೆಯಲ್ಲಿ ಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ .ರಾಜ್ಯದಾದ್ಯಂತ ಕೊರೋನ ನಿಯಂತ್ರಣ ಕ್ಕೆ ಲಾಕ್ ಡೌನ್ ಜಾರಿಯಲ್ಲಿದ್ದರೆ ಲಕ್ಕಪ್ಪಕೋಡಿ, ಅರ್ಬಿ,ಕಡೆಕಣ್ಣು,ನಿವಾಸಿಗಳಿಗೆ ಪಂಚಾಯತ್ ಮಣ್ಣಿನ ರಸ್ತೆ ಸರಿ ಇಲ್ಲದೆ ಲಾಕ್ ಡೌನ್ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಇಲ್ಲಿನ ಸಾರ್ವಜನಿಕರು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.
ಪಂಚಾಯತ್ ವತಿಯಿಂದ ಎರಡು ದಿನಗಳ ಹಿಂದೆ ರಸ್ತೆಯಲ್ಲಿರುವ ಕೆಸರನ್ನು ತೆರವುಗೊಳಿಸಲಾಗಿದ್ದು, ವಾಹನಗಳು ಮತ್ತು ಜನರು ಸಂಚರಿಸುವ ಹಾಗೆ ದಪ್ಪ ಮರಳು/ಕಲ್ಲಿನ ಹುಡಿ ಹಾಕಿ ವ್ಯವಸ್ಥೆ ಮಾಡುವ ಅವಶ್ಯಕತೆ ಇದ್ದು ಅದನ್ನು ಮಾಡಿಕೊಡಬೇಕೇಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.