ಭಾರತೀಯ ರೂಪದರ್ಶಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎಂದು ಅವರ ಮ್ಯಾನೇಜರ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
32 ವರ್ಷ ವಯಸ್ಸಿನ ಅವರು ಗರ್ಭಕಂಠದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ.
ಪೂನಂ ಪಾಂಡೆ 11 ಮಾರ್ಚ್ 1991ರಂದು ಕಾನ್ಸುರದಲ್ಲಿ ಜನಿಸಿದರು.
ಶೋಭಾನಾಥ್ ಪಾಂಡೆ ಮತ್ತು ವಿದ್ಯಾ ಪಾಂಡೆಯ ಮಗಳಾಗಿ ಜನಿಸಿದ ಈಕೆ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಮೃತ ಪೂನಂ ಪಾಂಡೆ ಶ್ರದ್ಧಾ ಪಾಂಡೆ ಮತ್ತು ನಿಲೇಶ್ ಪಾಂಡೆ ಎಂಬ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.



























