ಬಂಟ್ವಾಳ : ಷೇರ್ ಟ್ರೇಡಿಂಗ್ ಗಾಗಿ ಹೂಡಿಕೆ ಮಾಡಿ ಲಾಭ ಪಡೆಯುವಂತೆ ಹೇಳಿ ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಬಿ-ಮೂಡಾ, ಜೋಡುಮಾರ್ಗ ನಿವಾಸಿ ಸುಬ್ರಾಯ ರಾಮ ಮಡಿವಾಳ ವಂಚನೆಗೊಳಗಾದವರು.
ಸುಬ್ರಾಯ ರಾಮ ಮಡಿವಾಳ ಅವರ ಮೊಬೈಲ್ ಗೆ ನವೆಂಬರ್ 2023 ತಿಂಗಳಿನಲ್ಲಿ ಷೇರ್ ಟ್ರೇಡಿಂಗ್ ಗಾಗಿ ಹೂಡಿಕೆ ಮಾಡಿ ಲಾಭ ಪಡೆಯುವಂತೆ ವಾಟ್ಸ್ ಪ್ ಮೂಲಕ ಮೇಸೆಜ್ ಬಂದ ಮೇರೆಗೆ, ಸದ್ರಿ ಅಪರಿಚಿತ ಆರೋಪಿಗಳು ನೀಡಿದ ಸೂಚನೆಗಳನ್ನು ಅನುಸರಿಸಿ, ಜ.9 ರಿಂದ ಈವರೆಗೆ ಹಂತ ಹಂತವಾಗಿ ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 18,92,200/- ಲಕ್ಷ ರೂ ಹಣವನ್ನು ಪಾವತಿಸಿದ್ದು, ಆದರೆ ಆರೋಪಿಗಳು ಯಾವುದೇ ಲಾಭಾಂಶ ಮತ್ತು ಪಾವತಿಸಿದ ಹಣವನ್ನೂ ನೀಡದೇ ವಂಚಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ- 29/2024 ಕಲಂ: 66 (c), 66(D) ಐಟಿ ಕಾಯಿದೆ ಹಾಗೂ ಕಲಂ: 419, 420 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



























