ಪುತ್ತೂರು : ವಾಹನಗಳ ಸರ್ವಿಸ್ ಸೆಂಟರ್ ‘ಶಿವಾನಿ ಸರ್ವಿಸ್ ಸ್ಟೇಷನ್’ ಮುಕ್ರಂಪಾಡಿಯ ವಿಕಾಸ್ ಇಂಡಸ್ಟ್ರೀಸ್ ನಲ್ಲಿ ಶುಭಾರಂಭಗೊಂಡಿತು.
ದೀಪ ಬೆಳಗಿಸುವ ಮೂಲಕ ನೂತನ ಮಳಿಗೆಯನ್ನು ಉದ್ಘಾಟನೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರಾದ ಶಿವಪ್ರಸಾದ್ ಶೆಟ್ಟಿ ಹಾಗೂ ಮನೆಯವರು ಅತಿಥಿಗಳನ್ನು ಸ್ವಾಗತಿಸಿದರು.
ವೆಲ್ ವಾಟರ್ ಪಾಲಿಶ್, ಕಸ್ಟಮ್ ಪಾಲಿಶ್ ಹಾಗೂ ಎಲ್ಲಾ ರೀತಿಯ ವಾಹನಗಳ ಸರ್ವಿಸ್ ಗಳು ಇಲ್ಲಿ ಲಭ್ಯವಿದ್ದು, ಯಾವುದೇ ವಾಹನಗಳಾದರೂ ಅದನ್ನು ಪಳಪಳ ಹೊಳೆಯುವಂತೆ ಮಾಡುವ ಮೂಲಕ ಮತ್ತೆ ತಮ್ಮ ವಾಹನಗಳ ಮೇಲೆ ಒಲವು ಹೆಚ್ಚುವಂತೆ ಸಿದ್ಧಗೊಳಿಸಲಾಗುತ್ತದೆ.
ನಾಲ್ಕು ಬಾರಿ ವಾಹನಗಳನ್ನು ಸರ್ವಿಸ್ ಗೆ ನೀಡಿದರೆ ಒಂದು ಬಾರಿಯ ಸರ್ವಿಸ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ.