Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪೋಕ್ಸೋ ಪ್ರಕರಣದ ಆರೋಪಿ ಅದ್ದು ಪಡೀಲ್‌ಗೆ ನಿರೀಕ್ಷಣಾ ಜಾಮೀನು..!

    ಪೋಕ್ಸೋ ಪ್ರಕರಣದ ಆರೋಪಿ ಅದ್ದು ಪಡೀಲ್‌ಗೆ ನಿರೀಕ್ಷಣಾ ಜಾಮೀನು..!

    ಅಮೈ: ಲಾರಿ ಬೆಂಕಿಗಾಹುತಿ..!!

    ಅಮೈ: ಲಾರಿ ಬೆಂಕಿಗಾಹುತಿ..!!

    ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ಗೆ ‘Best Regional Jewellery Brand’ ಗೌರವ : ಕೈಯಿಂದ ತಯಾರಿಸಿದ ವೈವಿಧ್ಯಮಯ ಶಾರ್ಟ್ ಕರಿಮಣಿ ವಿನ್ಯಾಸಗಳಿಗೆ ವಿಶೇಷ ಮನ್ನಣೆ..!

    ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ಗೆ ‘Best Regional Jewellery Brand’ ಗೌರವ : ಕೈಯಿಂದ ತಯಾರಿಸಿದ ವೈವಿಧ್ಯಮಯ ಶಾರ್ಟ್ ಕರಿಮಣಿ ವಿನ್ಯಾಸಗಳಿಗೆ ವಿಶೇಷ ಮನ್ನಣೆ..!

    ಪುತ್ತೂರುದ ಪಿಲಿಗೊಬ್ಬು ಸೀಸನ್-4: ಚಪ್ಪರ ಮುಹೂರ್ತ..!

    ಪುತ್ತೂರುದ ಪಿಲಿಗೊಬ್ಬು ಸೀಸನ್-4: ಚಪ್ಪರ ಮುಹೂರ್ತ..!

    ಅಲಂಕಾರು: ಬೈಕ್ ಗೆ ಡಿಕ್ಕಿ ಹೊಡೆದ ಥಾರ್: ಬೈಕ್ ಸವಾರ ಮೃತ್ಯು:ಚಾಲಕ ಪರಾರಿ..!

    ಅಲಂಕಾರು: ಬೈಕ್ ಗೆ ಡಿಕ್ಕಿ ಹೊಡೆದ ಥಾರ್: ಬೈಕ್ ಸವಾರ ಮೃತ್ಯು:ಚಾಲಕ ಪರಾರಿ..!

    ವಿಟ್ಲ: ಕಲ್ಲಿನ ಕೋರೆಗೆ ಬಿದ್ದು ಮೂರು ಕಾಡುಕೋಣಗಳು ಮೃತ್ಯು..!

    ವಿಟ್ಲ: ಕಲ್ಲಿನ ಕೋರೆಗೆ ಬಿದ್ದು ಮೂರು ಕಾಡುಕೋಣಗಳು ಮೃತ್ಯು..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಮಂಗಳೂರು

ಸರಕಾರಿ ಜಮೀನಿನಲ್ಲಿರುವ ಗುಡಿಸಲು ತೆರವಿಗೆ ಆದೇಶ : ದಯಾಮರಣ ಕೋರಿದ ವೃದ್ಧ ದಂಪತಿ

February 19, 2024
in ಮಂಗಳೂರು, ರಾಜ್ಯ
0
ಸರಕಾರಿ ಜಮೀನಿನಲ್ಲಿರುವ ಗುಡಿಸಲು ತೆರವಿಗೆ ಆದೇಶ : ದಯಾಮರಣ ಕೋರಿದ ವೃದ್ಧ ದಂಪತಿ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಕಡಬ : ತಾವು ವಾಸಿಸುತ್ತಿರುವ ಮನೆಯನ್ನು ತೆರವುಗೊಳಿಸುವಂತೆ ನ್ಯಾಯಾಲಯದಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಕೌಕ್ರಾಡಿಯ ವೃದ್ಧ ದಂಪತಿ ತಮಗೆ ದಯಾಮರಣ ಕರುಣಿಸುವಂತೆ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

Advertisement
Advertisement

ರಾಧಮ್ಮ-ಮುತ್ತುಸ್ವಾಮಿ ದಂಪತಿ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಸರಕಾರಿ ಜಾಗದಲ್ಲಿ 6 ವರ್ಷಗಳಿಂದ ವಾಸವಾಗಿದ್ದಾರೆ.

Advertisement
Advertisement

ಚಿತ್ರದುರ್ಗದಲ್ಲಿ ಹುಟ್ಟಿ ಬೆಳೆದಿರುವ ಅವರು 6 ವರ್ಷಗಳ ಹಿಂದೆ ಕೆಲಸಕ್ಕಾಗಿ ಆಗಮಿಸಿ, ಕೌಕ್ರಾಡಿಯಲ್ಲೇ ಕೂಲಿ ಕೆಲಸ ಮಾಡುತ್ತಾ ನೆಲೆಸಿ ತಮ್ಮದೇ ಮನೆ ಬೇಕೆಂಬ ಕನಸು ಕಂಡು ತಾವು ಕೂಡಿಟ್ಟ ಸುಮಾರು 50 ಸಾವಿರ ರೂ.ಗಳನ್ನು ಸ್ಥಳೀಯ ವ್ಯಕ್ತಿಯೊಬ್ಬರಿಗೆ ನೀಡಿ ಅವರ ವಶದಲ್ಲಿದ್ದ ಸರಕಾರಿ ಜಾಗವನ್ನು ತೆಗೆದುಕೊಂಡು ಅಲ್ಲಿ ಗುಡಿಸಲು ನಿರ್ಮಿಸಿ ದನಕರುಗಳನ್ನು ಸಾಕುತ್ತಾ ಜೀವನ ಸಾಗಿಸುತ್ತಿದ್ದರು.

Advertisement

2 ವರ್ಷಗಳ ಹಿಂದೆ ತಾವು ವಾಸ್ತವ್ಯ ಇರುವ ಜಾಗಕ್ಕೆ ಹಕ್ಕುಪತ್ರ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಕಂದಾಯ ಅಧಿಕಾರಿಗಳು ತಿರಸ್ಕರಿಸಿದ್ದರು ಎನ್ನಲಾಗಿದೆ.

ಈ ನಡುವೆ ಬೆಳ್ತಂಗಡಿ ತಾಲೂಕಿನ ಅಶೋಕ್‌ ಆಚಾರ್ಯ ಅವರು ವೃದ್ಧ ದಂಪತಿಯನ್ನು ಒಕ್ಕಲೆಬ್ಬಿಸುವ ಸಲುವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ ಕಾರಣದಿಂದಾಗಿ ನ್ಯಾಯಾಲಯದ ಆದೇಶದಂತೆ ಅವರ ಗುಡಿಸಲನ್ನು ತೆರವುಗೊಳಿಸಲು ಕಂದಾಯ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ಸ್ಥಳೀಯ ಗ್ರಾಮಕರಣಿಕರು ಅವರ ಮನೆಗೆ ಬಂದು ಮೌಖಿಕವಾಗಿ ತಿಳಿಸಿ, ಮನೆಯನ್ನು ತೆರವು ಮಾಡುವಂತೆ ನೋಟಿಸ್‌ ಹಚ್ಚಿ ಹೋಗಿದ್ದಾರೆ ಎನ್ನಲಾಗಿದೆ.

ಮಗಳ ಹೆಸರಿಗೆ ನೋಟೀಸ್

ದಂಪತಿಗೆ ನೀಡಲಾದ ನೋಟೀಸ್ ಈಗಾಗಲೇ ಮದುವೆ ಮಾಡಿಕೊಟ್ಟ ಮಗಳ ಹೆಸರಲ್ಲಿದೆ. ಅವರಿಗೂ ಇವರು ಪ್ರಸ್ತುತ ವಾಸವಿರುವ ಮನೆಗೂ ದಾಖಲೆಗಳ ಪ್ರಕಾರ ಯಾವುದೇ ಸಂಬಂಧ ಇಲ್ಲ ಎನ್ನಲಾಗಿದೆ.

ಈ ವೃದ್ಧ ದಂಪತಿಯ ಬಳಿ ಆಧಾರ್‌, ರೇಷನ್‌ ಕಾರ್ಡ್‌, ಮತದಾನದ ಗುರುತಿನ ಚೀಟಿ ಸೇರಿದಂತೆ ಎಲ್ಲ ದಾಖಲೆಗಳೂ ಇವೆ. ನೀಡಿರುವ ನೋಟೀಸ್ ಪ್ರಕಾರ ಆ ಜಾಗವನ್ನು ಬಿಟ್ಟು ಅವರು ತೆರಳಬೇಕು ಎಂಬುದಾಗಿಯೂ ತಾಕೀತು ಮಾಡಲಾಗಿದೆ. ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ಯಾವುದೇ ಪಂಚಾಯತ್‌ ಸೌಲಭ್ಯಗಳು ಈ ಹಿರಿಜೀವಗಳ ಕುಟುಂಬಕ್ಕೆ ಲಭ್ಯವಾಗಿಲ್ಲ. ಅವರಿಗೆ ಬೇರೆ ಯಾವುದೇ ಆಸ್ತಿಗಳಾಗಲೀ, ಆಶ್ರಯವಾಗಲೀ ಇಲ್ಲ ಎನ್ನಲಾಗಿದೆ.

ಮನೆಯ ಬಾಗಿಲಿಗೆ ನೊಟೀಸ್‌ ಹಚ್ಚಿದ ಬಳಿಕ ದಿಕ್ಕು ತೋಚದಂತಾಗಿರುವ ಅವರು ಕಡಬ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗಳಿಗೆ ದಯಾಮರಣಕ್ಕಾಗಿ ಮನವಿ ಮಾಡಿದ್ದು, ನಮ್ಮನ್ನು ಒಂದಾ ಆ ಸರಕಾರಿ ಜಾಗದಲ್ಲಿ ತಾವು ನಿರ್ಮಿಸಿರುವ ಸಣ್ಣ ಗುಡಿಸಲಿನಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಿ. ಸಾಧ್ಯವಿಲ್ಲ ಎಂದಾದರೆ ದಯಮಾಡಿ ವೃದ್ಧರಾದ ನಮಗೆ ದಯಾಮರಣ ಅಥವಾ ಇನ್ಯಾವುದೇ ರೀತಿಯಲ್ಲಿ ಒಳ್ಳೆಯ ಮರಣಕ್ಕೆ ಅವಕಾಶವನ್ನು ನೀಡಬೇಕು ಎಂದು ಕೋರಿದ್ದಾರೆ.

ನ್ಯಾಯಾಲಯದ ಆದೇಶದಂತೆ ನಾವು ನೋಟೀಸ್ ನೀಡಿದ್ದೇವೆ. ಆದರೆ ವೃದ್ಧ ದಂಪತಿ ನಮ್ಮ ಕಚೇರಿಗೆ ಬಂದು ನಾವು ವಾಸ್ತವ್ಯ ಇರುವ ಮನೆಗೂ ನಮ್ಮ ಮಗಳಿಗೂ ಯಾವುದೇ ಸಂಬಂಧವಿಲ್ಲ. ಅವರನ್ನು ಮದುವೆ ಮಾಡಿಕೊಡಲಾಗಿದೆ. ನಮಗೆ ಬೇರೆ ನೆಲೆ ಇಲ್ಲ ಎಂದು ತಿಳಿಸಿದ್ದಾರೆ. ಆ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
–ಪ್ರಭಾಕರ ಖಜೂರೆ, ಕಡಬ ತಹಶೀಲ್ದಾರ್‌

Previous Post

ಮಂಗಳೂರು : ಹಿಂದೂ ಕಾರ್ಯಕರ್ತರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ : ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನ..!

Next Post

ಕೆಲಸ ಸಿಗದ ಚಿಂತೆ : ನೇತ್ರಾವತಿಗೆ ಹಾರಿದ ಪುತ್ತೂರಿನ ಯುವಕ : ಸ್ಥಳೀಯ ಯುವಕರ ತಂಡದಿಂದ ರಕ್ಷಣೆ..!

OtherNews

ಮಂಗಳೂರು: ಕಾರು ಶೋರೂಂ ನಲ್ಲಿ ಕಾಣಿಸಿಕೊಂಡ ಬೆಂಕಿ..!!
ಕ್ರೈಮ್

ಮಂಗಳೂರು: ಕಾರು ಶೋರೂಂ ನಲ್ಲಿ ಕಾಣಿಸಿಕೊಂಡ ಬೆಂಕಿ..!!

September 26, 2026
ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗತವೈಭವ ಮರಳಿಸಲು ಸಂಘಟನೆ :ನೂತನ ಡಿಸಿಸಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಸಂಕಲ್ಪ..!
ಮಂಗಳೂರು

ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗತವೈಭವ ಮರಳಿಸಲು ಸಂಘಟನೆ :ನೂತನ ಡಿಸಿಸಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಸಂಕಲ್ಪ..!

September 24, 2026
ಚಾರ್ ಧಾಮ್ ಯಾತ್ರೆ ತೆರಳಿದ್ದ ಕುಂಪಲದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು..!
ಕ್ರೈಮ್

ಚಾರ್ ಧಾಮ್ ಯಾತ್ರೆ ತೆರಳಿದ್ದ ಕುಂಪಲದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು..!

September 23, 2026
ಮಂಗಳೂರು: ಹೈವೋಲ್ಟೇಜ್‌ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ..!
Featured

ಮಂಗಳೂರು: ಹೈವೋಲ್ಟೇಜ್‌ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ..!

September 22, 2026
ಅಪಘಾತದಲ್ಲಿ ಗಾಯಗೊಂಡ ಮಾಜಿ ಸಚಿವ ರಮಾನಾಥ ರೈ, ಆಪ್ತ ಕಾರ್ಯದರ್ಶಿ ಡೆನ್ಜಿಲ್ ಆರೋಗ್ಯ ವಿಚಾರಿಸಿದ ಸಂಸದ ಬ್ರಿಜೇಶ್ ಚೌಟ..!
ಮಂಗಳೂರು

ಅಪಘಾತದಲ್ಲಿ ಗಾಯಗೊಂಡ ಮಾಜಿ ಸಚಿವ ರಮಾನಾಥ ರೈ, ಆಪ್ತ ಕಾರ್ಯದರ್ಶಿ ಡೆನ್ಜಿಲ್ ಆರೋಗ್ಯ ವಿಚಾರಿಸಿದ ಸಂಸದ ಬ್ರಿಜೇಶ್ ಚೌಟ..!

September 21, 2026
ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್‌ ಸವಾರನ ಮೆದುಳು ನಿಷ್ಕ್ರಿಯ; ಅಂಗಾಂಗ ದಾನಕ್ಕೆ ಮುಂದಾದ ಕುಟುಂಬ..!
ಕ್ರೈಮ್

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್‌ ಸವಾರನ ಮೆದುಳು ನಿಷ್ಕ್ರಿಯ; ಅಂಗಾಂಗ ದಾನಕ್ಕೆ ಮುಂದಾದ ಕುಟುಂಬ..!

September 17, 2026

Leave a Reply Cancel reply

Your email address will not be published. Required fields are marked *

Recent News

ಪೋಕ್ಸೋ ಪ್ರಕರಣದ ಆರೋಪಿ ಅದ್ದು ಪಡೀಲ್‌ಗೆ ನಿರೀಕ್ಷಣಾ ಜಾಮೀನು..!

ಪೋಕ್ಸೋ ಪ್ರಕರಣದ ಆರೋಪಿ ಅದ್ದು ಪಡೀಲ್‌ಗೆ ನಿರೀಕ್ಷಣಾ ಜಾಮೀನು..!

September 27, 2026
ಅಮೈ: ಲಾರಿ ಬೆಂಕಿಗಾಹುತಿ..!!

ಅಮೈ: ಲಾರಿ ಬೆಂಕಿಗಾಹುತಿ..!!

September 26, 2026
ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ಗೆ ‘Best Regional Jewellery Brand’ ಗೌರವ : ಕೈಯಿಂದ ತಯಾರಿಸಿದ ವೈವಿಧ್ಯಮಯ ಶಾರ್ಟ್ ಕರಿಮಣಿ ವಿನ್ಯಾಸಗಳಿಗೆ ವಿಶೇಷ ಮನ್ನಣೆ..!

ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ಗೆ ‘Best Regional Jewellery Brand’ ಗೌರವ : ಕೈಯಿಂದ ತಯಾರಿಸಿದ ವೈವಿಧ್ಯಮಯ ಶಾರ್ಟ್ ಕರಿಮಣಿ ವಿನ್ಯಾಸಗಳಿಗೆ ವಿಶೇಷ ಮನ್ನಣೆ..!

September 26, 2026
ಪುತ್ತೂರುದ ಪಿಲಿಗೊಬ್ಬು ಸೀಸನ್-4: ಚಪ್ಪರ ಮುಹೂರ್ತ..!

ಪುತ್ತೂರುದ ಪಿಲಿಗೊಬ್ಬು ಸೀಸನ್-4: ಚಪ್ಪರ ಮುಹೂರ್ತ..!

September 26, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.