ಬಂಟ್ವಾಳ : ಎಸ್.ವಿ.ಎಸ್. ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಎಡನೀರು ಪುಂಡರೀಕಾಕ್ಷ ಕಲ್ಲೂರಾಯ (83) ರವರು ಬಿ.ಸಿ.ರೋಡ್ ನ ಕಾಮಜೆಯ ಸ್ವಗೃಹದಲ್ಲಿ ನಿಧನರಾದರು.
ಪುಂಡರೀಕಾಕ್ಷ ಕಲ್ಲೂರಾಯ ರವರು ಪ್ರಗತಿಪರ ಕೃಷಿಕರಾಗಿದ್ದು, ಬಿ.ಸಿ.ರೋಡ್ ನ ತುಳು ಶಿವಳ್ಳಿ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದರು.
ಮೃತರು ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.