ಪುತ್ತೂರು: ಅಡಿಕೆ ವ್ಯಾಪಾರಸ್ಥರ ಸಂಘದ ಕೋಶಾಧಿಕಾರಿ ಸಾಲ್ಮರ ನಿವಾಸಿ ಲೀಡ್ಸ್ ಸುಫಾರಿ ಪ್ರಾಡಕ್ಟ್‌ನ ಮಾಲಕ ಉದಯ ಶೆಟ್ಟಿ(46ವ)ರವರು ಮೇ 23ರಂದು ಸಂಜೆಹೃದಯಾಘಾತದಿಂದ ನಿಧನರಾದರು.
ಉಡುಪಿ ಮೂಲದವರಾದ ಉದಯ ಶೆಟ್ಟಿಯವರು ಪುತ್ತೂರಿನಲ್ಲಿ ಅಡಿಕೆ ಉದ್ಯಮವನ್ನು ಆರಂಭಿಸಿ, ಸಾಲ್ಮಾರ ದಲ್ಲಿ ವಾಸ್ತವ್ಯ ಹೊಂದಿದ್ದರು. ಮೇ 23ರಂದು ಸಂಜೆ ತನ್ನ ಪತ್ನಿ ಪುತ್ರಿಯರೊಂದಿಗೆ ವಾಕಿಂಗ್ ಮುಗಿಸಿಮನೆ ತಲುಪಿದಾಗ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ. ಪುತ್ತೂರು ಎಪಿಎಂಸಿ ಯಾರ್ಡ್‌ನಲ್ಲಿ ಲೀಡ್ಸ್ ಸುಫಾರಿ ಪ್ರಾಡಕ್ಟ್ ಮತ್ತು ಪಡೀಲ್‌ನಲ್ಲಿ ಅಡಿಕೆ ಗಾರ್ಬಲ್‌ನ್ನು ಹೊಂದಿದ್ದರು. ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಅವರು ಪುತ್ತೂರು ರೋಟರಿ ಸಿಟಿಯ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಮೃತರುಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಉದಯ ಶೆಟ್ಟಿಯವರ ನಿಧನದ ವಾರ್ತೆ ತಿಳಿಯುತ್ತಲೇ ಹಲವು ಮಂದಿ ಅಡಿಕೆ ವ್ಯಾಪಾರಸ್ಥರು ಮತ್ತು ರೋಟರಿ ಸಂಸ್ಥೆಯ ಹಲವು ಪದಾಧಿಕಾರಿಗಳು, ಸದಸ್ಯರು ಆಸ್ಪತ್ರೆಗೆಆಗಮಿಸಿದ್ದರು.ಅಡಿಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವೀಂದ್ರನಾಥ್ ರೈ ಬಳೆಮಜಲು,ರೋಟರಿ ಸಿಟಿ ಅಧ್ಯಕ್ಷ ಕೃಷ್ಣಮೋಹನ್, ಮಾಜಿ ಅಧ್ಯಕ್ಷ ಎಮ್.ಆರ್ ಜಯಕುಮಾರ್ ರೈ, ನಟೇಶ್ ಉಡುಪ, ಡಾ.ಶಶಿಧರ್ ಕಜೆ, ಪುರುಷೋತ್ತಮ ಮುಂಗ್ಲಿಮನೆ, ಭವಿನ್ ಶೇಟ್ ಸೇರಿದಂತೆ ಹಲವಾರು ಮಂದಿ ಆಸ್ಪತ್ರೆಯಲ್ಲಿ ಜಮಾಯಿಸಿದ್ದರು.