ಪುತ್ತೂರು : ಕೋವಿಡ್ ನ ಸಂಕಷ್ಟದ ಸಂದರ್ಭದಲ್ಲಿ ನೊಂದ ಕುಟುಂಬಗಳಿಗೆ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರವಿ ಶೆಟ್ಟಿ ನೇಸರ ಅವರ ನಿರ್ದೇಶನದಂತೆ ಆಡಳಿತ ಮಂಡಳಿ ಮತ್ತು ಊರವರ ಸಹಕಾರದಲ್ಲಿ ಮೇ.28 ರಂದು ಸಂಜೆ “ಶ್ರೀದೇವರ ಪ್ರಸಾದ” ಅನ್ನೋ ಹೆಸರಿನಲ್ಲಿ ಜಿನಸಿ ಸಾಮಾಗ್ರಿಗಳು ಮತ್ತು ತರಕಾರಿಗಳನ್ನು ಒಳಗೊಂಡ ಕಿಟ್ ಗಳನ್ನು ನೀಡಲು ನಿರ್ಧರಿಸಲಾಗಿದ್ದು, ಪ್ರಥಮ ಕಾರ್ಯಕ್ರಮಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಗುವುದು.
ನಾಳೆಯ ಮೊದಲ ಹಂತದ ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಗಳನ್ನು ಗುರುತಿಸಲಾಗಿದೆ. ನಾಳೆ ಸಂಜೆ ನಡೆಯುವ ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಸಹಕಾರ ನೀಡಬೇಕಾಗಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಕಷ್ಟದ ಕಾಲದಲ್ಲಿ ವ್ಯವಸ್ಥಾಪನ ಸಮಿತಿಯ ಈ ನಿರ್ಧಾರ ಉತ್ತಮ ನಡೆಗೆ ಸಾಕ್ಷಿಯಾಗಿದ್ದು ಮಾದರಿಯಾಗಿದೆ ಹಾಗೂ ಪ್ರಶಂಶೆಗೆ ಪಾತ್ರವಾಗಿದೆ.