ಕೋಡಿಂಬಾಡಿ : ಕೋಡಿಂಬಾಡಿ ಗ್ರಾಮದ ಕೃಷ್ಣಗಿರಿಯಲ್ಲಿನ ಅವೈಜ್ಞಾನಿಕ ಚರಂಡಿ ರಿಪೇರಿ, ಕುಸಿದ ತಡೆಗೋಡೆಯ ದುರಸ್ಥಿ ಹಾಗೂ ಬೀದಿ ದೀಪಗಳ ನಿರ್ವಹಣೆ ಮತ್ತು ಹೊಸ ಚರಂಡಿ ನಿರ್ಮಾಣ ಮಾಡುವಂತೆ ಕೋರಿ ಅಲ್ಲಿನ ನಾಗರಿಕರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಇತ್ತೀಚಿನ ದಿನಗಳಲ್ಲಿ ಕೃಷ್ಣಗಿರಿ ಕಾಲೋನಿಯಲ್ಲಿ ಅಸಮರ್ಪಕವಾದ ಚರಂಡಿ ರಿಪೇರಿ ಕಾರ್ಯ ನಡೆದಿದ್ದು, ಮೇಲ್ನೋಟಕ್ಕೆ ಇಂಗುಗುಂಡಿ ಮಾಡಿದಂತೆ ಆಗಿರುತ್ತದೆ. ಮಳೆಗಾಲದಲ್ಲಿ ನೀರು ಇಂಗಿ ಮಲೇರಿಯಾ, ಡೆಂಗ್ಯೂ ಮುಂತಾದ ಕಾಯಿಲೆಗಳು ಬರುವುದಕ್ಕೆ ಅವಕಾಶ ಮಾಡಿ ಕೊಟ್ಟಾಂತಾಗಿದೆ. ಅದೇ ರೀತಿ ಮಾರ್ಗದ ಬದಿಯಲ್ಲಿ ಹಾಕಿದ ಹೊಸ ತಡೆಗೋಡೆ ಕೂಡ ಕುಸಿತವಾಗಿರುತ್ತದೆ. ಮೇಲ್ನೋಟಕ್ಕೆ ಅದು ಕಳಪೆ ಕಾಮಗಾರಿ ಆಗಿರುವುದು ಕಂಡು ಬರುತ್ತದೆ. ಇಲ್ಲಿನ ಬೀದಿದೀಪಗಳು ಕೂಡ ಕೆಲವು ಸಮಯಗಳಿಂದ ಉರಿಯುತ್ತಿಲ್ಲ ಅದರ ಕಡೆಯೂ ಗಮನ ಹರಿಸಬೇಕಾಗಿ ಹಾಗೇ ಕೃಷ್ಣಗಿರಿಯಿಂದ ಮೋನಡ್ಕಕ್ಕೆ ಹೋಗುವ ದಾರಿಯಲ್ಲಿ ಚರಂಡಿ ವ್ಯವಸ್ಥೆ ಅಸಮರ್ಪಕವಾಗಿರುತ್ತದೆ. ಇಲ್ಲಿನ ವ್ಯಕ್ತಿಯೊಬ್ಬರು ಮಳೆಗಾಲದಲ್ಲಿ ಹರಿದು ಹೋಗುವ ನೀರಿನ ಚರಂಡಿಯನ್ನು ಅತಿಕ್ರಮಿಸಿ ತೆಂಗಿನ ಸಸಿಗಳನ್ನು ನೆಟ್ಟು ಬೇಲಿ ನಿರ್ಮಿಸಿದ್ದು, ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಕೃಷ್ಣಗಿರಿ ಕಾಲೋನಿ ನಾಗರಿಕರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರು, ಶಶಿಧರ, ಜಯಂತ, ಸಂತೋಷ್,ನಿಖಿಲ್ ಕುಮಾರ್, ಸುಕೇಶ್ ಕೃಷ್ಣಗಿರಿ, ಆನಂದ ಕೃಷ್ಣಗಿರಿ ಉಪಸ್ಥಿತರಿದ್ದರು.