ನೆಲ್ಯಾಡಿ : ಅರಸಿನಮಕ್ಕಿ, ಉಡ್ಯೆರೆ ನಿವಾಸಿ ಕುಸುಮಾವತಿ
ಅವರು ಮೇ.27 ರಂದು ಕೋವಿಡ್ ಕಾರಣದಿಂದಾಗಿ ಮೃತ ಪಟ್ಟಿದ್ದು ಅವರ ಅಂತ್ಯಕ್ರಿಯೆಯನ್ನು ಅವರ ಮಕ್ಕಳ ಜೊತೆ,ಹಿಂದೂ ಜಾಗರಣ ವೇದಿಕೆ ನೆಲ್ಯಾಡಿಯ ಕೃಷ್ಣಪ್ಪ ಕಟ್ಟೆಮಜಲು, ಕುಶಾಲಪ್ಪನೆಲ್ಯಾಡಿ, ಲೋಕೇಶ್ ಕೊಲ್ಯೊಟ್ಟು ಹಾಗೂ ಅನಿಲ್ ರೈ ಹಾರ್ಪಳ ಇವರುಗಳು ಪಿ ಪಿ ಇ ಕಿಟ್ ಧರಿಸಿ ಹಿಂದೂ ಧರ್ಮದ ವಿಧಿ ವಿಧಾನದಂತೆ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.
ರವಿಪ್ರಸಾದ್ ಶೆಟ್ಟಿ ರಾಮನಗರ, ಪ್ರಹ್ಲಾದ್ ಶೆಟ್ಟಿ, ಸುದೀಪ್ ಶೆಟ್ಟಿ ಪಟ್ಟೆ , ದಿನೇಶ್ ನಾಯ್ಕ್, ನಿತಿನ್ ಮಕ್ಕಿಗದ್ದೆ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸುವಲ್ಲಿ ಸಹಕರಿಸಿದರು.