ಪುತ್ತೂರು: ಕೋವಿಡ್ -19 ಎರಡನೇ ಅಲೆಯ ಸರ್ಕಾರ ಪರಿಹಾರ ಮೊತ್ತವನ್ನು ಪಡೆಯಲು ಅರ್ಜಿ ಸಲ್ಲಿಸಲು ಪುತ್ತೂರಿನಲ್ಲಿ ರೈ ಎಸ್ಟೇಟ್ ಮಾಲಕ, ಕೋಡಿಂಬಾಡಿ ಅಶೋಕ್ ಕುಮಾರ್ ರೈ ಉಚಿತವಾಗಿ ವ್ಯವಸ್ಥೆ ಮಾಡಿದ್ದಾರೆ.
ಈಗಾಗಲೇ ಒಂದನೇ ಲಾಕ್ ಡೌನ್ ನಲ್ಲಿ ಸಾವಿರಾರು ಜನರಿಗೆ ಸಹಾಯ ಹಸ್ತ ಚಾಚಿದ ಕೊಡುಗೈದಾನಿ ಅಶೋಕ್ ರೈ ಎರಡನೇ ಲಾಕ್ ಡೌನ್ ನಲ್ಲೂ ತನ್ನ ಸಹಾಯ ಹಸ್ತ ಚಾಚುತಿದ್ಧಾರೆ.
ಲಾಕ್ ಡೌನ್ ಸಂದರ್ಭ ಅರ್ಜಿ ಸಲ್ಲಿಸಲು ಕಷ್ಟವಾಗಿರುವುದನ್ನು ಮನಗಂಡು ಇದೀಗ ಸ್ವಂತ ತಾವೇ ತಮ್ಮ ಕಚೇರಿಯಲ್ಲಿ ನಡೆದ ವ್ಯವಸ್ಥೆ ಮಾಡಿದ್ದಾರೆ.
ಕೋವಿಡ್ ತೀವ್ರತೆಯ ಹಿನ್ನೆಲೆಯಲ್ಲಿ ಅಟೋರಿಕ್ಷಾ ಚಾಲಕರು , ಟ್ಯಾಕ್ಷಿ ಚಾಲಕರು ಮತ್ತು ಮ್ಯಾಕ್ಷಿ ಕ್ಯಾಬ್ ಚಾಲಕರಿಗೆ ಸರಕಾರದ ಪರಿಹಾರ ಮೊತ್ತ ರೂ. 3000.00 ಪಡೆಯಲು ಉಚಿತವಾಗಿ ಅರ್ಜಿ ಸಲ್ಲಿಸಲು
ಸಂಪರ್ಕ ಮಾಡಬೇಕಾದ ವಿಳಾಸ : ರೈ ಎಸ್ಟೇಟ್ ಎಜ್ಯುಕೇಶನ್ ಎಂಡ್ ಚಾರಿಟೇಬಲ್ ಟ್ರಸ್ಟ್ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನ ಬಳಿ ಬೈಪಾಸ್ ರೋಡ್ ದರ್ಬೆ ಪುತ್ತೂರು
ದೂರವಾಣಿ : 08251298033, 9459663719 , 8904707969
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು: ಆಧಾರ್ ಕಾರ್ಡ್ , ಡಿಎಲ್, ಆರ್ ಸಿ , ಬ್ಯಾಡ್ಜ್ ನಂಬರ್, ಫಿಟ್ ನೆಸ್ ಸರ್ಟಿಪಿಕೆಟ್ , ಬ್ಯಾಂಕ್ ಪಾಸ್ ಪುಸ್ತಕ . ( ಮೊಬೈಲ್ ತರುವುದು. ಅಲ್ಲದೆ ಮೊಬೈಲ್ ಗೆ ಬರುವ ಒಟಿಪಿ ನಂಬರ್ ತಿಳಿಸುವುದು)