ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ದಲ್ಲಿ ಹಿಂದೂ ಜಾಗರಣ ವೇದಿಕೆ ಶ್ರೀ ಸುದರ್ಶನ ಘಟಕ ಪೊಳಲಿ ನೇತೃತ್ವದಲ್ಲಿ ಗೋ ಪೂಜೆ ಹಾಗೂ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಯಿತು.
ಸಾಲು ಸಾಲು ಹಣತೆಗಳು ದೇವಳದ ಅಂದವನ್ನು ಹೆಚ್ಚಿಸಿತ್ತು ಅಲ್ಲದೆ ನೋಡುಗರ ಮನ ಸೆಳೆಯಿತು.
ಈ ಸಂದರ್ಭದಲ್ಲಿ ಸಂಚಾಲಕರಾದ ಕೊಡ್ಮಾನ್ ಕಾಂತಪ್ಪ ಶೆಟ್ಟಿ, ವೆಂಕಟೇಶ್ ನಾವಡ ಪೊಳಲಿ,ಸಂತೋಷ್ ಶೆಟ್ಟಿ ಪೊಳಲಿ,ಯಶವಂತ ಕೋಟ್ಯಾನ್ ಪೊಳಲಿ,ಹಿಂ.ಜಾ.ವೇ. ಮಂಗಳೂರು ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಬೆಂಜನಪದವು ಹಿಂ.ಜಾ.ವೇ ಬಂಟ್ವಾಳ ತಾಲೂಕಿನ ಅಧ್ಯಕ್ಷತಿರುಲೇಶ್ ಬೆಳ್ಳೂರು ವಲಯ ಅಧ್ಯಕ್ಷ ಮುರಳಿ ಪೊಳಲಿ,ವಲಯ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಕಮ್ಮಾಜೆ ಹಾಗೂ ಶ್ರೀ ಸುದರ್ಶನ ಘಟಕ ಪೊಳಲಿ ಇದರ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.