ವಿಟ್ಲ: ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುದುಮಾನು ದಿ.ತುಕ್ರಪ್ಪ ಗೌಡರ ಪುತ್ರ ಪುರುಷೋತ್ತಮ( 42 ವ.) ರವರು ಮೇ.27ರಂದು ಕೋವಿಡ್ ನಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರು ಬೆಂಗಳೂರಿನ ಗೋಲ್ಡನ್ ಸಿನ್ಸ್ ಟೆಕ್ಸ್ ಟೈಲ್ಸ್ ನ ಉದ್ಯೋಗಿಯಾಗಿದ್ದು, ಬೆಂಗಳೂರಿನ ಎಂಟನೇ ಮೈಲ್ ನ ಭೂಮಿಕಾ ಲೇ ಔಟ್ ನಲ್ಲಿ ಪತ್ನಿ ಮಗುವಿನೊಂದಿಗೆ ವಾಸವಾಗಿದ್ದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಮೇ.25ರಂದು ಅವರನ್ನು ಬೆಂಗಳೂರಿನ ಬಿಡದಿಯಲ್ಲಿರುವ ಬಿಜಿಎಸ್ ಜೀವ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೇ.27ರಂದು ಸಾಯಂಕಾಲ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತದೇಹವನ್ನು ಮೇ.28ರಂದು ಮುಂಜಾನೆ ಕುದುಮಾನ್ ನ ಮನೆಗೆ ತಂದು ಅಂತ್ಯಕ್ರೀಯೆ ನೆರವೇರಿಸಲಾಯಿತು.
ಮೃತರು ಪತ್ನಿ ಅನುರಾಧ, ಒಂದು ವರುಷದ ಹೆಣ್ಣು ಮಗು ತಶ್ವಿಕಾ, ತಾಯಿ ವೆಂಕಮ್ಮ, ಸಹೋದರ ನಿತ್ಯಾನಂದ, ಸಹೋದರಿಯ ರಾದ ಕಮಲ, ಲಕ್ಷ್ಮಿ, ಕುಸುಮಾವತಿ, ಮೋಹಿನಿಯವರನ್ನು ಅಗಲಿದ್ದಾರೆ.