ಪುತ್ತೂರು : ಹಿಂದುತ್ವ ಮತ್ತು ಹಿಂದೂ ಧರ್ಮದ ದೈವ-ದೇವರುಗಳ ಮೇಲೆ ಇಟ್ಟಿರುವ ನಂಬಿಕೆ ಅಚಲವಾಗಿರುವಂತದ್ದು, ಅದನ್ನು ಪುತ್ತೂರು ಶಾಸಕರಿಂದ ಪಾಠ ಕಲಿಯುವಂತದ್ದು ಏನೂ ಇಲ್ಲ., ಚುನಾವಣೆ ಬರುವಾಗ ಹಣೆಗೆ ಭಸ್ಮ ಹಾಕುವ, ಅಂಗಿ ಮೇಲೆ ಜನಿವಾರ ಧರಿಸುವ ನಾಯಕರು ಬಿಜೆಪಿಯಲ್ಲಿಲ್ಲ ನಿಮ್ಮದು ಏನಿದ್ದರೂ ನಕಲಿ ಹಿಂದುತ್ವ ಎಂದು ಪುತ್ತೂರು ಬಿಜೆಪಿ ಕಾರ್ಯದರ್ಶಿ ಲೋಹಿತ್ ಅಮ್ಚಿನಡ್ಕ ಹೇಳಿದ್ದಾರೆ.
ತುಳುನಾಡಿನ ಸತ್ಯ ಕೊರಗಜ್ಜನಿಗೆ ನ್ಯಾಯ ಕೊಡಿಸುವುದಾಗಿ ಬಿಜೆಪಿಯವರು ಎಲ್ಲಿಯೂ ಹೇಳಿಲ್ಲ ಬದಲಾಗಿ ಕೊರಗಜ್ಜನ ಪವಿತ್ರವಾದ ಕಟ್ಟೆ,ಭಕ್ತರು ಹಾಕುವ ಕಾಣಿಕೆಯ ಹುಂಡಿಗೆ ಅಪಚಾರವಾದಾಗ ಹಾಗೂ ದೇಯಿ ಬೈದೇತಿಯ ಮೂರ್ತಿಗೆ ಅಪಚಾರವಾದಾಗ ಬಿಜೆಪಿ ಪಾದಯಾತ್ರೆ ಪ್ರತಿಭಟನೆ ಮಾಡಿ ಭಕ್ತರ ನಂಬಿಕೆಗೆ ನ್ಯಾಯ ಕೊಡಿಸಿದೆ ಎಂದು ಹೇಳಿದ್ದೇವೆ ಹೊರತು ರಾಹುಲ್ ಗಾಂಧಿ ಹೇಳಿದಾಗೆ ಹಿಂದೂ ಧರ್ಮ ನಂಬಿರುವ ಶಕ್ತೀಯನ್ನು ಸೋಲಿಸುತ್ತೇವೆ ಎಂದು ಹೇಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದ.ಕನ್ನಡ ಜಿಲ್ಲೆಯಲ್ಲಿ ಮತ್ತು ಪುತ್ತೂರು ತಾಲೂಕಿನಲ್ಲಿ ಹಿಂದೂಗಳ ನಂಬಿಕೆಗೆ ಘಾಸಿ ಮಾಡಿದವರಿಗೆ ಪರೋಕ್ಷವಾಗಿ ಹಿಂದಿನಿಂದ ಬೆಂಬಲ ನೀಡಿದ ಎಸ್.ಡಿ.ಪಿ.ಐಯವರೊಂದಿಗೆ ಹೊಂದಾಣಿಕೆ ಮಾಡಿದ ಕಾಂಗ್ರೆಸ್ ನ ಪುತ್ತೂರು ಶಾಸಕರಿಂದ ಬಿಜೆಪಿಯವರಿಗೆ ಬೋಧನೆ ಮಾಡುವುದು ಅಗತ್ಯವಿಲ್ಲ ಎಂದು ಲೋಹಿತ್ ಅಮ್ಚಿನಡ್ಕ ತಿಳಿಸಿದ್ದಾರೆ.