ವಿಟ್ಲ : ಅಳಿಕೆ ಗ್ರಾಮದ ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತ ಗೋಪಾಲ ಬೀಮಾವರ ಸಹಿತ ಹಲವು ಮಂದಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ರವರ ಸಮ್ಮಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಪುತ್ತೂರು ಬಿಜೆಪಿ ಚುನಾವಣಾ ಉಸ್ತುವಾರಿ ಸುಲೋಚನ ಜಿ.ಕೆ.ಭಟ್, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಉಪಾಧ್ಯಕ್ಷರು ಹಾಗೂ ಪುಣಚ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಹರಿಪ್ರಸಾದ್ ಯಾದವ್, ಪುಣಚ ಮಹಾಶಕ್ತಿ ಕೇಂದ್ರ ಚುನಾವಣಾ ಪ್ರಭಾರಿ ಸಹಜ್ ರೈ ಬಳಜ್ಜ, ಚುನಾವಣಾ ನಿರ್ವಹಣಾ ಸಮಿತಿ ಸಹ ಸಂಚಾಲಕ ಉಮೇಶ್ ಕೋಡಿಬೈಲ್, ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜ್ರೆಮಾರ್, ಶಕ್ತಿ ಕೇಂದ್ರ ಸಂಚಾಲಕರಾದ ಸದಾನಂದ ಶೆಟ್ಟಿ, ಪಕ್ಷದ ಪ್ರಮುಖರಾದ ಕಾನ ಈಶ್ವರ ಭಟ್, ಬೂತ್ ಅಧ್ಯಕ್ವರಾದ ಸೌಜೀವ ಗೌಡ, ಸದಾಶಿವ ಅಳಿಕೆ, ವಧ್ವ ಈಶ್ವರ ಭಟ್, ಉದಯ್ ಕುಮಾರ್, ರಿತೇಶ್ ಮೊದಲಾದ ಹಿರಿಯ ಕಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
