ಮುಂಡೂರು : ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಏಳು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮುಂಡೂರು ಭಾರತೀಯ ಜನತಾ ಪಾರ್ಟಿ ವತಿಯಿಂದ ಸೇವಾ ದಿವಸವಾಗಿ ಆಚರಣೆ ಮಾಡಲಾಯಿತು.
ಈ ದಿನದ ನೆನಪು ಶಾಶ್ವತವಾಗಿ ಮುಂಡೂರು ಜನಮಾನಸದಲ್ಲಿ ಉಳಿಯಬೇಕು ಎಂಬ ದೃಷ್ಟಿಕೋನದಿಂದ ಮುಂಡೂರು ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಬಿಜೆಪಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪ ಗೌಡ, ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ಅರುಣಾ ಕಣ್ಣರ್ನೂಜಿ ಯವರ ಅಪೇಕ್ಷೆಯಂತೆ, ಬೂತ್ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ್, ಕಾರ್ಯದರ್ಶಿ ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ 1ನೇ ಬೂತ್ ನಲ್ಲಿಯ ಹಳ್ಳಕ್ಕೆ ಸುಮಾರು 6 ಸಾವಿರ ವೆಚ್ಚದಲ್ಲಿ ಸ್ಪನ್ ಪೈಪ್ ಅಳವಡಿಸಿ ಮತ್ತು ಹಾಳಾಗಿದ್ದ ಸೋಲಾರ್ ದೀಪವನ್ನು ರಿಪೇರಿ ಮಾಡಿ ಅಳವಡಿಸಿ ಮೂಲಭೂತ ಸಮಸ್ಯೆ ಯೊಂದನ್ನು ಪರಿಹರಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಅರುಣ್ ಪುತ್ತಿಲ, ಬಿಕೆ ಸುಂದರ ನಾಯ್ಕ್, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ರಾದ ಹರೀಶ್ ನಾಯ್ಕ್, ಹಿರಿಯರಾದ ವಸಂತ ರೈ, ಕೊರಗಪ್ಪ ನಾಯ್ಕ್, ಬೂತ್ ಸಮಿತಿಯ ಯುವ ಮೋರ್ಚಾ ಸದಸ್ಯರು ಮತ್ತು ಬಿಜೆಪಿ ಕಾರ್ಯಕರ್ತರಾದ ಧನಂಜಯ. ಪ್ರಸಾದ್,ಯೋಗೀಶ್, ತುಕ್ರ ನಾಯ್ಕ್, ಅಭಿಷೇಕ್, ಅಮೃತ್ ಪ್ರತೀಕ್, ಕಿಸ್ತು ಡಿಸೋಜ, ಶಿವಪ್ಪ ನಾಯ್ಕ್, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.