ಮಂಗಳೂರು : ಸುರತ್ಕಲ್, ಕುಳಾಯಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಬರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬೆಳಗ್ಗೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಕಾಯುವ ದೃಶ್ಯ ಸಾಮಾನ್ಯವಾಗುತ್ತಿದ್ದು, ಈ ನಿಟ್ಟಿನಲ್ಲಿ ಜನತೆಗೆ ಲಸಿಕೆ ಪಡೆಯಲು ಬೇಕಾದ ವ್ಯವಸ್ಥೆ ಮಾಡುವ ಸಲುವಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಸುರತ್ಕಲ್, ಕುಳಾಯಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ,ಮನಪಾ ಸದಸ್ಯರು, ವೈದ್ಯರ ಜತೆ ಚರ್ಚಿಸಿದರು.
ಲಸಿಕೆ ಪಡೆಯಲು ಬಂದ ಜನತೆ ಹೆಚ್ಚು ಸಮಯ ಕಾಯದೆ ಶೀಘ್ರ ನೋಂದಣಿ ಮಾಡುವ ಸಲುವಾಗಿ ಪ್ರತ್ಯೇಕ ಟೇಬಲ್ ಅಳವಡಿಕೆ, ಹಾಗೂ ಅಧಾರ್ ಪರಿಶೀಲನೆ ಮತ್ತಿತರ ಕಾರ್ಯವನ್ನು ಮಾಡುವಂತೆ ಸಲಹೆ ನೀಡಿದರು. ಟೋಕನ್ ಕೊಡುವ ವ್ಯವಸ್ಥೆಯ ಸಮರ್ಪಕ ಜಾರಿಗೂ ಸೂಚಿಸಿದರು. ನಾಗರಿಕರಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ವ್ಯವಸ್ಥೆಯನ್ನು ಸ್ವತ: ಕೈಗೊಂಡರು. ಈ ಸಂದರ್ಭ ಕೆಲವು ನೂನ್ಯತೆಗಳನ್ನು ಸಾರ್ವಜನಿಕರು ಶಾಸಕರಲ್ಲಿ ಹೇಳಿಕೊಂಡಾಗ ಸರಿ ಪಡಿಸುವ ಭರವಸೆ ನೀಡಿದರು.
ಈ ಸಂದರ್ಭ ಮಂಡಲ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ಮನಪಾ ಸದಸ್ಯರಾದ ಸರಿತ ಶಶಿಧರ್, ವರುಣ್ ಚೌಟ, ನಯನ ಆರ್.ಕೋಟ್ಯಾನ್, ಶ್ವೇತ ಎ. ಶೋಭಾ ರಾಜೇಶ್, ಲಕ್ಷ್ಮಿ ಶೇಖರ ದೇವಾಡಿಗ, ಲೋಕೇಶ್ ಬೊಳ್ಳಾಜೆ,ಶಂಶಾದ್ ಅಬೂಬಕ್ಕರ್, ಯುವ ಮೋರ್ಚಾ ಅಧ್ಯಕ್ಷರಾದ ಭರತ್ ರಾಜ್ ಕೃಷ್ಣಾಪುರ, ಹಾಗೂ ಪಕ್ಷದ ಜವಾಬ್ದಾರಿಯುತ ಪ್ರಮುಖರು, ಟಾಸ್ಕ್ ಫೋರ್ಸ್ ಸದಸ್ಯರುಗಳು, ಮತ್ತಿತರರು ಉಪಸ್ಥಿತರಿದ್ದರು.