ಮಂಗಳೂರು : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಎಸ್ ಎನ್ ಡಿಪಿಎಸ್ ಪ್ರಶಸ್ತಿ ಪುರಸ್ಕೃತ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನದ ಬಿರುದು ಪಡೆದ, ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳ ಹಾಗೂ ತತ್ವದೊಂದಿಗೆ ನಿರಂತರ ಸಮಾಜಸೇವೆ ಮಾಡುತ್ತಿರುವ ‘ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ’ ಸಂಘಟನೆ ವತಿಯಿಂದ ಕೊರೊನಾದ ಈ ಸಂಕಷ್ಟದ ಸಮಯದಲ್ಲಿ ಕರಾವಳಿಗರಿಗೆ ಹಾಗೂ ಸಾರ್ವಜನಿಕರಿಗೆ ತುರ್ತು ಉಪಯೋಗದ ನಿಟ್ಟಿನಲ್ಲಿ ಉಚಿತ ಸುಸಜ್ಜಿತ ಆಕ್ಸಿಜನ್ ಒಳಗೊಂಡ ‘ಹೈ ಟೆಕ್ ಆಂಬ್ಯುಲೆನ್ಸ್ ‘ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಜೂ.1 ರಂದು ಲೋಕಾರ್ಪಣೆಗೊಳ್ಳಲಿದೆ.
ಬಿರುವೆರ್ ಕುಡ್ಲ ಸಂಘಟನೆಯಿಂದ ಒದಗಿಸುವ ಈ ಸೇವೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಹದಿನೈದು ಕಿಲೋಮೀಟರ್ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಸಾರ್ವಜನಿಕರು, ರೋಗಿಗಳು, ಹಾಗೂ ಸಂಘ ಸಂಸ್ಥೆಗಳು ತುರ್ತು ಉಪಯೋಗಕ್ಕಾಗಿ ಈ ಸೌಲಭ್ಯದ ಸದುಪಯೋಗವನ್ನು ಪಡೆಯ ಬಹುದಾಗಿದೆ ಎಂದು ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ, ಕೇಂದ್ರ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.