ಪುತ್ತೂರು ಸಮೀಪ ಇರುವ ಈಶ್ವರಮಂಗಲದಲ್ಲಿನ ಮೆಡಿಕಲ್ ವೊಂದಕ್ಕೆ ಅನ್ಯ ಕೋಮಿನ ವ್ಯಕ್ತಿ ನುಗ್ಗಿ ಮಹಿಳಾ ಸಿಬ್ಬಂದಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ವರದಿಯಾಗಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪೇಟೆಯಲ್ಲಿರುವ ಮೆಡಿಕಲ್ ಗೆ ಔಷಧಿ ಖರೀದಿಸಲು ಬಂದಿದ್ದ ವ್ಯಕ್ತಿ ಮೆಡಿಕಲ್‌ನಲ್ಲಿ ಯುವತಿಯೊಬ್ಬಳೇ ಇರುವುದನ್ನು ಗಮನಿಸಿ ನೇರವಾಗಿ ಒಳನುಗ್ಗಿ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಯುವತಿ ಜೋರಾಗಿ ಕಿರುಚಿದ್ದು, ಕೂಡಲೇ ಜಮಾವಣೆಗೊಂಡ ಸಾರ್ವಜನಿಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. .. ಹಿಂದು ಜಾಗರಣ ವೇದಿಕೆ ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.