ಇಂದಿರಾ ಕ್ಯಾಂಟೀನ್ ಎಂದರೆ ಅದು ಕರ್ನಾಟಕ ರಾಜ್ಯ ಸರಕಾರದ ಕ್ಯಾಂಟೀನ್ ಆಗಿದೆ, ಅದರ ಜವಾಬ್ದಾರಿ ಪುತ್ತೂರಿನಲ್ಲಿ ಶಾಸಕರದ್ದಾಗಿದೆ, ಅದನ್ನು ಅವರು ಪರಿಶೀಲನೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ, ಅದು ಅವರ ಕರ್ತವ್ಯವಾಗಿದೆ. ಎಂಟು ಊಟ ಒಬ್ಬನೇ ಕೊಂಡೊಯ್ದಿದ್ದಾನೆ ಎಂಬ ಬಗ್ಗೆ ಪರಿಶೀಲನೆ ನಡೆಸಿದ ಶಾಸಕರು ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಅದನ್ನು ಕಂಡು ಮಾಜಿ ಶಾಸಕರು ಬಡವರ ಊಟದ ವಿಷಯದಲ್ಲಿ ಈ ರೀತಿ ಪರಿಶೀಲನೆ ನಡೆಸುವ ಶಾಸಕರು ನಾಲಾಯಕ್ ಶಾಸಕರು ಎಂದು ಹೇಳಿಕೆ ನೀಡಿದ್ದು ನಾವು ಅದನ್ನು ವಿರೋಧಿಸುತ್ತೇವೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರ ಬೂಡಿಯಾರ್ ರಾಧಾಕೃಷ್ಣ ರೈಯವರು ಹೇಳಿದರು.
ಚುನಾವಣೆ ನಡೆದು ಮೂರು ವರ್ಷಗಳು ಪೂರೈಸುತ್ತಾ ಬಂದಿರುವ ಶಾಸಕರ ಸಮಯದಲ್ಲಿ ಮೂರು ಚುನಾವಣೆಗಳು ನಡೆದಿದ್ದು, ನಗರ ಸಭೆ ಚುನಾವಣೆಯಲ್ಲಿ 31 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬಿಜೆಪಿಗಳಿಸಿದ್ದು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 31 ರಲ್ಲಿ 25 ಸ್ಥಾನಗಳನ್ನು ಬಿಜೆಪಿಗಳಿಸಿದೆ ಹಾಗೂ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ 12 ರಲ್ಲಿ 8 ಸ್ಥಾನಗಳನ್ನು ಬಿಜೆಪಿಗಳಿಸಿದ್ದು ಯಾರು ನಾಲಾಯಕ್ ಎಂದು ಜನಗಳೇ ತೀರ್ಮಾನಿಸಿದ್ದು, ಅದನ್ನು ಇವರು ಹೇಳುವ ಅವಶ್ಯಕತೆಗಳಿಲ್ಲ ಎಂದರು.
ಕೊರೊನಾ ಒಂದನೇ ಅಲೆಯ ಸಂದರ್ಭದಲ್ಲಿ 138 ಕೋಟಿ ಜನಸಂಖ್ಯೆ ಇದ್ದು, ಆ ಸಮಯದಲ್ಲಿ ಕೋವಿಡ್ ನಿರ್ವಹಣೆಗಾಗಿ ಪ್ರಧಾನಿಯವರು ಮುಂಚೂಣಿಯಲ್ಲಿ ಇದ್ದು ಸಮರ್ಪಕವಾಗಿ ನಿರ್ವಹಿಸಿದರು. ಜಗತ್ತಿನ ರಾಷ್ಟ್ರಗಳ ಪ್ರಧಾನಿಗಳು, ನಾಯಕರು ಈ ವಿಷಯವಾಗಿ ನಮ್ಮ ದೇಶದ ಪ್ರಧಾನಿಯವರನ್ನು ಪ್ರಶಂಸಿದ್ದಾರೆ. ಆದರೇ ಕಾಂಗ್ರೆಸ್ ನಾಯಕರುಗಳು ಈ ಬಗ್ಗೆ ವಿರೋಧಿಸಿದ್ದಲ್ಲದೇ ಯಾರೂ ಕೂಡ ಅದರ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಅದೇ ರೀತಿ ಕೊರೊನಾ ಲಸಿಕೆಯ ಬಗ್ಗೆಯೂ ಅಪಪ್ರಚಾರವನ್ನು ಮಾಡಿ ಅನೇಕ ಜನರು ಲಸಿಕೆ ತೆಗೆದುಕೊಳ್ಳದ ಹಾಗೇ ಮಾಡಿದ್ದು ಅಲ್ಲದೇ ಕೋಟಿಗಟ್ಟಲೆ ಲಸಿಕೆಗಳು ವ್ಯರ್ಥವಾಗಲೂ ಮತ್ತು ಸಾವಿರಾರು ಜನರ ಸಾವಿಗೆ ಕಾಂಗ್ರೆಸ್ ನವರೆ ಕಾರಣರಾಗಿದ್ದಾರೆ ಎಂದು ಅವರು ಹೇಳಿದರು.
ದ. ಕ ಜಿಲ್ಲೆಯಲ್ಲಿ ಏಳು ಶಾಸಕರು ಏಳು ವಾರ್ ರೂಮ್ ಗಳನ್ನು ಮಾಡಿ ಉತ್ತಮ ರೀತಿಯಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಜಿಲ್ಲೆಯ ಸಂಸದರ ವಾರ್ ರೂಮ್ ಇದ್ದು ಸಂಪರ್ಕಿಸಿದವರಿಗೇ ಉತ್ತಮ ರೀತಿಯ ಚಿಕಿತ್ಸೆಗಳನ್ನು ಒದಗಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಎಪ್ಪತ್ತು ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವೂ ಧರ್ಮ ಆಧಾರಿತ ಮತ್ತು ಜಾತಿ ಆಧಾರಿತವಾಗಿ ಕಾರ್ಯ ನಿರ್ವಹಿಸಿ ಈ ದೇಶವನ್ನೇ ಸರ್ವನಾಶ ಮಾಡಿದ್ದು, ಮುಂದಿನ ದಿನಗಳಲ್ಲಿ ಅವೆಲ್ಲವನ್ನೂ ಬಿಟ್ಟು ಪ್ರಧಾನಿ ಮೋದಿಯವರ ‘ಸಬ್ ಕಾ ಸಾಥ್ ಸಬ್ ಕಾ ವಿಚಾರ್’ ರಲ್ಲಿ ರಾಜಕೀಯ ಮಾಡಿ ದೇಶದ ಚಿಂತನೆಯನ್ನು ತೆಗೆದುಕೊಳ್ಳಲಿ ಎಂದು ನಾವು ಅವರಲ್ಲಿ ಬೇಡಿಕೆಯನ್ನು ಇಡುತ್ತಿದ್ದು, ಇಲ್ಲವಾದಲ್ಲಿ ಈ ದೇಶದ ಸರ್ವ ನಾಶಕ್ಕೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವೇ ಕಾರಣವಾಗಬಹುದು ಎಂದು ಹೇಳಿದರು.