ಬಜರಂಗದಳದ ಪುತ್ತೂರು ಜಿಲ್ಲಾ ಸಹಸಂಯೋಜಕ್ ಲತೀಶ್ ಗುಂಡ್ಯ ಇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳು ಹರಿದಾಡುತಿದ್ದು ಸದ್ರಿ ವಿಷಯಕ್ಕೆ ಸಂಬಂಧಪಟ್ಟಂತೆ ಸುಳ್ಯದ ಪ್ರಗತಿ ಆಂಬುಲೆನ್ಸ್ ನ ಅಭಿಲಾಷ್ ಎಂಬವರು ಇಲ್ಲ ಸಲ್ಲದ ಆರೋಪದೊಂದಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ ಮುಖಾಂತರ ಸುಳ್ಳು ಕೇಸ್ ನೀಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಲತೀಶ್ ಗುಂಡ್ಯ ಮೇಲೆ ಕೊಲೆ ಬೆದರಿಕೆ. ಕೋಮು ವಿಚಾರಕ್ಕೆ ಸಂಬಂಧಪಟ್ಟಂತೆ ಸುಳ್ಳು ಆರೋಪ ಮಾಡಿರುವುದನ್ನು ವಿಶ್ವಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ ಎಂದು ವಿಶ್ವಹಿಂದೂ ಪರಿಷತ್ ಬಜರಂಗದಳದ ಪ್ರಮುಖರು ಹೇಳಿದ್ದಾರೆ.
“ಕೊರೋನಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಜರಂಗದಳ ಸಂಘಟನೆ ಕಾರ್ಯಕರ್ತರು ಜಿಲ್ಲೆಯಲ್ಲಿ ಸೇವಾ ಭಾರತಿಯ ಮಾರ್ಗದರ್ಶನದಲ್ಲಿ ಕೋವಿಡ್ ವಾರಿಯರ್ ಹಾಗಿ ತಮ್ಮ ತಮ್ಮ ಮನೆಗೂ ಹೋಗದೆ ಒಂದು ಕಡೆ ವಾಸ್ತವ್ಯ ಹೂಡಿ ಕೊರೋನಾದಿಂದ ಮೃತರಾದವರ ಶವಸಂಸ್ಕಾರವನ್ನು ಅವರ ಅವರ ಸಂಪ್ರದಾಯ ಹಾಗೂ ಕಾನೂನು ನಿಯಾಮವಳಿ ಪ್ರಕಾರ ಮಾಡುವ ಹಾಗೂ ರಕ್ತದಾನದಂತಹ ನಿಸ್ವಾರ್ಥ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಹಗಲು ರಾತ್ರಿ ಎನ್ನದೆ ಕೆಲಸ ನಿರ್ವಹಿಸುತ್ತಿದ್ದಾರೆ.ಸುಳ್ಯ ಪ್ರಖಂಡದಲ್ಲಿ ಬಜರಂಗದಳ ಜಿಲ್ಲಾ ಸಹ ಸಂಚಾಲಕ್ ಲತೀಶ್ ಗುಂಡ್ಯ ಅವರ ನೇತೃತ್ವದಲ್ಲಿ ಬಜರಂಗದಳ ಹಲವಾರು ಕಾರ್ಯಕರ್ತರು ಈವರೆಗೂ ಹಲವಾರು ಕೊರೋನಾದಿಂದ ಮೃತರಾದವರ ಶವಸಂಸ್ಕಾರವನ್ನು ಮಾಡುವ ಮೂಲಕ ಸಮಾಜದ ಸೇವೆಗೆ ತಮ್ಮನ್ನು ತಾವು ಮುಡುಪಾಗಿಟ್ಟಿದ್ದಾರೆ. ಆದರೆ ಸೇವಾ ಕಾರ್ಯದಲ್ಲಿ ನಿರತರಾಗಿರುವ ಸಂದರ್ಭದಲ್ಲಿ ಲತೀಶ್ ಗುಂಡ್ಯರವರ ಮೇಲೆ ಯಾರದೋ ಒತ್ತಡಕ್ಕೆ ಮಣಿದು ಕೆಲವರು ಸುಳ್ಳು ಆರೋಪಗಳ ಮೂಲಕ ಅವರ ತೇಜೋವಧೆ ಮಾಡಲು ಪ್ರಯತ್ನಿಸುತ್ತಿರುವುದು ವಿಪರ್ಯಾಸ ಇದನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಸೇವೆ ಸಂಸ್ಕಾರ ಸುರಕ್ಷಾ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಹಗಲು ರಾತ್ರಿ ಅನ್ನದೆ ಕಾರ್ಯ ನಿರ್ವಹಿಸುತ್ತಿರುವ ಬಜರಂಗದಳ ಕಾರ್ಯಕರ್ತರನ್ನು ಸುಳ್ಳು ಆರೋಪಗಳ ಮೂಲಕ ಅಪಪ್ರಚಾರ ಮಾಡಲು ಪ್ರಯತ್ನಿಸುತ್ತಿರವವರಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಎಚ್ಚರಿಕೆ ನೀಡುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ.ಕೃಷ್ಣ ಪ್ರಸನ್ನ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ಬಜರಂಗದಳದ ಪುತ್ತೂರು ಜಿಲ್ಲಾ ಸಂಯೋಜಕ್ ಶ್ರೀಧರ್ ತೆಂಕಿಲರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.