ಪುತ್ತೂರು : ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ನಡೆಯುವ 26ನೇ ವರುಷದ ಶ್ರೀ ಕೃಷ್ಣ ಲೋಕ ಕಾರ್ಯಕ್ರಮದ ನೂತನ ಸಮಿತಿ ರಚನಾ ಸಭೆ ವಿವೇಕಾನಂದ ಶಿಶು ಮಂದಿರ ಶಿವಪೇಟೆ ಪರ್ಲಡ್ಕದಲ್ಲಿ ನಡೆಯಿತು.

ಈ ವರ್ಷದ ಸಮಿತಿಯ ಗೌರವಾಧ್ಯಕ್ಷರಾಗಿ ರಾಜಿ ಬಲರಾಮ್, ಅಧ್ಯಕ್ಷರಾಗಿ ಸಂತೋಷ್ ಕುಮಾರ್ ರೈ, ಉಪಾಧ್ಯಕ್ಷರಾಗಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಮೇಘನಾ ಪಾಣಾಜೆ, ಜೊತೆ ಕಾರ್ಯದರ್ಶಿಯಾಗಿ ರಮ್ಯಾ ಭಟ್, ಕೋಶಾಧಿಕಾರಿಯಾಗಿ ಕಿಶನ್ ಕುಮಾರ್ ಕೆ.ಎಸ್ ರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿಶು ಮಂದಿರದ ಅಧ್ಯಕ್ಷರಾದ ರಾಜಗೋಪಾಲ ಭಟ್, ಕಾರ್ಯದರ್ಶಿಯಾದ ಅಕ್ಷಯ್ ಕುಮಾರ್ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಶ್ರೀಕೃಷ್ಣಲೋಕದ ನಿಕಟ ಪೂರ್ವ ಅಧ್ಯಕ್ಷರಾದ ದಾಮೋದರ ಪಾಟಾಳಿ, ಗೌರವ ಸಲಹೆಗಾರರಾಗಿ ಉಪೇಂದ್ರ ಬಲ್ಯಾಯ ಅಶೋಕ್ ಕುಂಬ್ಳೆ, ವಿದ್ಯಾವರ್ಧಕ ಸಂಘದ ಶಿವಪ್ರಸಾದ್, ಸಂತೋಷ್ ಬೊನಂತಾಯ, ಡಾ ಸುಧಾ ಯಸ್ ರಾವ್, ನಿವೃತ್ತ ಶಿಕ್ಷಕಿ ಪ್ರೇಮಲತಾ, ಉದಯ್, ವಿವಿಧ ಕ್ಷೇತ್ರದ ಗಣ್ಯರು, ಮಾತಾಜಿ, ಪಾಲಕರು ಉಪಸ್ಥಿತರಿದ್ದರು.