ಮಂಗಳೂರು: ಬೆಲೆ ಇಲ್ಲದೇ ಕಂಗಲಾದ ರೈತರ ಬೆಳೆಯನ್ನು ಸೂಕ್ತ ಬೆಲೆ ನೀಡಿ ಖರೀದಿಸುವ ಮುಂದಾದ ಮಂಗಳೂರಿನ ಯುವ ಉದ್ಯಮಿ, ಹೌದು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರೈತರು ತಾವು ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸಲು ಯಾರು ಮುಂದೆ ಬಾರದೇ ಇರುವುದರಿಂದ ತಮ್ಮ ಬೆಳೆಗಳನ್ನು ಬೀದಿಗೆ ಸುರಿಯುವುದನ್ನು ನೋಡಿದ್ದೇನೆ. ಇನ್ನು ಮುಂದಕ್ಕೆ ರೈತರು ತಾವು ಬೆಳೆದ ತರಕಾರಿ, ಹಣ್ಣುಗಳನ್ನು ನಮ್ಮ ಸಂಸ್ಥೆಯ ಸಿಬ್ಬಂದಿ ಅವರ ಸ್ಥಳಗಳಿಗೆ ಫಾರ್ಮ್ ಗಳಿಗೆ ಬಂದು ನಮ್ಮ ಪನಾಮ ಕಂಪೆನಿ ಖರೀದಿ ಮಾಡಲಿದೆ. ರೈತರಿಗೆ ಸೂಕ್ತ ಬೆಲೆ ನೀಡಿ ಖರೀದಿಸುವ ಮೂಲಕ ಅವರಿಗೆ ಸಹಾಯ ನೀಡಲಿದೆ ಎಂದು ಮಂಗಳೂರಲ್ಲಿ ಪನಮಾ ನೇಚರ್ ಫ್ರೆಶ್ ಸಂಸ್ಥೆಯ ಅಧ್ಯಕ್ಷ ವಿವೇಕ್ ರಾಜ್ ಹೇಳಿದ್ದಾರೆ.
ಮಂಗಳೂರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸುಮಾರು ೭೫ ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿಕರು ಬೆಳೆದ ಉತ್ಪನ್ನಗಳನ್ನು ಖರೀದಿಸುವ ಯೋಜನೆಯನ್ನು ಕೈಗೊಂಡಿದ್ದೇನೆ ಎಂದು ಹೇಳಿದ ಅವರು, ಕೊರೊನಾದಿಂದ ಜನಜೀವನ ಸರಿಯಾಗಲು ಬಹಳ ಸಮಯ ಹಿಡಿಯಲಿದೆ. ಹೀಗಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು ಮುಂಜಾಗ್ರತಾ ಕ್ರಮವಾಗಿ 50 ಲಕ್ಷವನ್ನು ಇಟ್ಟಿದ್ದೇನೆ ಎಂದರು.
ಈವರೆಗೆ 16೦೦೦ ಮಂದಿಗೆ ಊಟ, ಸುಮಾರು 4350 ಕುಟುಂಬದವರಿಗೆ ಮತ್ತು ದಿನಗೂಲಿ ನೌಕರರಿಗೆ ಕಿಟ್ ಗಳನ್ನೂ ನೀಡಲಾಗಿದೆ. ಜೊತೆಗೆ ಹಲವು ಬಡ ಕುಟುಂಬಗಳ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ಸಹ ಪನಾಮ ಕಂಪೆನಿ ವತಿಯಿಂದ ಭರಿಸಲಾಗಿದೆ. ಪ್ರಸಕ್ತ ತಮ್ಮ ಕಡೆಯಿಂದ ನೀಡುವ ಕಿಟ್ ಒಂದು ಕುಟುಂಬಕ್ಕೆ 15 ದಿನಗಳ ಕಾಲ ಉಪಯೋಗಕ್ಕೆ ಬರಲಿದೆ. ಇದು ಹಲವು ಕುಟುಂಬಗಳಿಗೆ ಸಹಾಯವಾಗಲಿದೆ ಅಂದರು. ಸುದ್ದಿಗೋಷ್ಠಿಯಲ್ಲಿ ರಜಾಕ್ ಸೇರಿ ಇತರರು ಉಪಸ್ಥಿತರಿದ್ದರು.