ಬಂಟ್ವಾಳ : ಬೈಪಾಸ್ ಜಂಕ್ಷನ್‌ನಲ್ಲಿ ಆ.4ರ ಸಂಜೆ ನಡೆದ ಎರಡು ತಂಡಗಳ ಹೊಡೆದಾಟ ಹಾಗೂ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಅಶ್ವಥ್, ಶರಣ್, ವಸಂತ ಬಂಧಿತರು.
ಉಳಿದವರಿಗಾಗಿ ಬಂಟ್ವಾಳ ನಗರ ಇನ್ಸ್ಪೆಕ್ಟರ್ ಅನಂತ ಪದ್ಮನಾಭ, ಪಿಎಸ್‌ಐ ರಾಮಕೃಷ್ಣ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.
ಹಲ್ಲೆ ಹಾಗೂ ಚೂರಿ ಇರಿತಕ್ಕೊಳಗಾಗಿ ಗಾಯಗೊಂಡಿರುವ ಹರೀಶ ಪೂಜಾರಿ, ವಿನೀತ್ ಹಾಗೂ ಪೃಥ್ವಿರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.