ವಿಟ್ಲ : ಮಾಧವ ಮಾವೆಯವರ ತಂದೆ ಮಲಾರು ಸುಂದರ ಸಪಲ್ಯ ನಿಧನರಾಗಿದ್ದು, ಮಾವೆಯವರ ನಿವಾಸಕ್ಕೆ ಮಾಜಿ ಸಂಸದ, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಭೇಟಿ ನೀಡಿ ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರು, ಬಿಜೆಪಿ ಹಿರಿಯ ಮುಖಂಡರಾದ ಜಗದೀಶ್ ಅಧಿಕಾರಿ, ಉದ್ಯಮಿ ಹರೀಶ್ ಕುತ್ತಾರು, ಮನು ರೈ ಪುತ್ತೂರು, ಶ್ರೀನಾಥ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಅರುಣ್ ವಿಟ್ಲ, ಬಿಜೆಪಿ ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ, ಅರವಿಂದ್ ರೈ ಮೂರ್ಜೆಬೆಟ್ಟು, ಉಮೇಶ್ ಶೆಟ್ಟಿ ತಾರಿಯಡ್ಕ, ನಾಗೇಶ್ ಶೆಟ್ಟಿ, ಸುಂದರ ಶೆಟ್ಟಿ ಚೆಂಬರಡ್ಕ, ವಿದ್ಯೇಶ್ ರೈ, ಲಕ್ಷ್ಮಣ್ ಸಾಲೆತ್ತೂರು, ರಮೇಶ್ ಕಾರಾಜೆ, ಆನಂದ ಪೂಜಾರಿ, ನೇಮಿರಾಜ, ನಾಗರಾಜ ಶೆಟ್ಟಿ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.