ಮಂಗಳೂರು : ಹಸಿ ಕಸ ಮತ್ತು ಒಣ ಕಸ ವಿಂಗಡಿಸಲು ವಿಫಲವಾದ ಅಪಾರ್ಟ್ ಮೆಂಟ್ ಗೆ ಮಂಗಳೂರು ಮಹಾನಗರಪಾಲಿಕೆ 53 ಸಾವಿರ ರೂಪಾಯಿ ದಂಡ ವಿಧಿಸಿದೆ.
ಮಂಗಳೂರು ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಸಲು ಮಹಾನಗರಪಾಲಿಕೆ ನಗರದಲ್ಲಿ ಒಣ ಕಸ ಮತ್ತು ಹಸಿ ಕಸವನ್ನು ಪ್ರತ್ಯೇಕಿಸಬೇಕೆಂದು ಈಗಾಗಲೇ ಆದೇಶ ಹೊರಡಿಸಿತ್ತು. ಆದರೆ ನಗರದ ಕೆಲ ಅಪಾರ್ಟ್ ಮೆಂಟ್ ಗಳಲ್ಲಿ ಕಸ ವಿಂಗಡಣೆ ಮಾಡದ ಬಗ್ಗೆ ದೂರು ಬಂದ ಹಿನ್ನಲೆ ಮಹಾನಗರಪಾಲಿಕೆ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಚಿಲಿಂಬಿಯಲ್ಲಿರುವ ಮಾರ್ಸ್ ಆಂಡ್ ವೆನುಸ್ ಅಪಾರ್ಟ್ಮೆಂಟ್ ಕಸ ವಿಂಗಡಣೆ ಕುರಿತ ಆದೇಶವನ್ನು ಪಾಲಿಸಿರಲಿಲ್ಲ, ಈ ಹಿನ್ನಲೆ ಪಾಲಿಕೆ ಅಧಿಕಾರಿಗಳು ಅಪಾರ್ಟ್ಮೆಂಟ್ ಅಸೋಶಿಯೇಷನ್ ಗೆ ಎಚ್ಚರಿಕೆ ನೀಡಿದ್ದರೂ ಆದರೂ ಪಾಲಿಕೆ ಆದೇಶವನ್ನು ಪಾಲಿಸದ ಹಿನ್ನಲೆ ಅಪಾರ್ಟ್ಮೆಂಟ್ ನಲ್ಲಿರುವ ಪ್ರತಿಯೊಂದು ಮನೆಗೆ 500 ರೂಪಾಯಿಯಂತೆ ದಂಡ ವಿಧಿಸಿದ್ದು, ದಂಡ ಪಾವತಿಸದಿದ್ದರೆ ನೀರಿನ ಸಂಪರ್ಕವನ್ನು ತೆಗೆದು ಹಾಕುವ ಎಚ್ಚರಿಕೆ ನೀಡಿದೆ.