ಪುತ್ತೂರು: ಕೋವಿಡ್ -19 ಸಾಂಕ್ರಾಮಿಕ ಖಾಯಿಲೆಯು ಹರಡುತ್ತಿರುವ ಹಿನ್ನೆಲೆಯಲ್ಲಿ ಇದನ್ನು ನಿಯಂತ್ರಣ ಮಾಡಲು ಸರಕಾರ ಲಾಕ್ ಡೌನ್ ಘೋಷಿಸಿರುವ ಕಾರಣ ದಿಂದ ಆಟೋ ಚಾಲಕರಿಗೆ ಬಾಡಿಗೆ ಇಲ್ಲದೆ, ದಿನನಿತ್ಯ ಮನೆಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲು ಸಂಕಷ್ಟ ಪಡುತ್ತಿರುವ ಸಂದರ್ಭದಲ್ಲಿ ಪುತ್ತೂರು ಪೇಟೆಯ ಬಡ ಆಟೋ ಚಾಲಕರಿಗೆ ಮತ್ತು ಹಲವು ಬಡ ಕುಟುಂಬಗಳಿಗೆ ಉದ್ಯಮಿ, ರೈ ಎಸ್ಟೇಟ್ ಮಾಲಕರು, ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಅಕ್ಕಿ , ತರಕಾರಿ, ದಿನಸಿಯ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ತನ್ನ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ವಿತರಿಸಿದರು.
ಈಗಾಗಲೇ ತಾಲೂಕಿನ ಹಲವು ಕಡೆಗಳಲ್ಲಿ ಸುಮಾರು ಬಡ ಕುಟುಂಬಗಳಿಗೆ ಆಹಾರದ ಸಾಮಾಗ್ರಿಯ ಕಿಟ್ ಗಳನ್ನು ವಿತರಿಸಿರುತ್ತಾರೆ, ಅಲ್ಲದೆ ಕೊರೊನಾದ ಬಗ್ಗೆ ವಹಿಸಬೇಕಾದ ಎಚ್ಚರಿಕೆಯ ಕ್ರಮಗಳ ಬಗ್ಗೆ ತಿಳಿಸಿದರು.