ಪುತ್ತೂರು: 2020-21 ನೇ ಸಾಲಿಗೆ ರಾಜ್ಯದ ರೈತರಿಗೆ ಸಹಕಾರಿ ಪತ್ತಿನ ಸಂಘಗಳು ನಿವ್ವಳ ಶೂನ್ಯ ಬಡ್ಡಿ ದರದಲ್ಲಿ ರೂ.3ಲಕ್ಷ ವರೆಗೆ ಅಲ್ಪಾವಧಿ ಕೃಷಿ ಸಾಲ ನೀಡುವಂತೆ ಸರಕಾರವನ್ನು ಒತ್ತಾಯಿಸುವಂತೆ ಜೂ.7ರಂದು ಬನ್ನೂರು ರೈತರ ಸಹಕಾರಿ ಸಂಘದಿಂದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ನೇತೃತ್ವದಲ್ಲಿ ಶಾಸಕರಿಗೆ ಮನವಿ ಮಾಡಿದರು.
ಒಂದು ಕುಟುಂಬದ ಓರ್ವ ಸದಸ್ಯನಿಗೆ ರೂ.20,000 ಮಾಸಿಕ ವೇತನ ಪಡೆಯುವ ಹಾಗೂ ಮೂರು ವರ್ಷದಿಂದ ಆದಾಯ ತೆರಿಗೆ ಪಾವತಿಸುವ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದಿಲ್ಲ ಎಂದು ಆದೇಶ ಮಾಡಿದ್ದು ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಈ ಹಿಂದಿನಂತೆ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ಶಾಸಕರಿಗೆ ಅಭಿನಂದನೆ:
ಸಹಕಾರಿ ಸಂಘದ ಸಿಬಂದಿಗಳಿಗೆ ಕೋವಿಡ್-19 ಲಸಿಕೆ ವಿತರಿಸಲು ಕಾರಣೀಕರ್ತರಾದ ಶಾಸಕ ಸಂಜೀವ ಮಠಂದೂರುರವರನ್ನು ಸಂಘದ ವತಿಯಿಂದ ಅಭಿನಂದಿಸಿದರು.
ಸಂಘದ ನಿರ್ದೇಶಕರಾದ ಎನ್ ಸುಭಾಸ್ ನಾಯಕ್, ಮೋಹನ್ ಪಕ್ಕಳ ಕುಂಡಾಪು, ಸುಂದರ ಪೂಜಾರಿ ಬಡಾವು, ಕೃಷಿಕ ವಿಷ್ಣುಮೂರ್ತಿ ಕೆದಿಲಾಯ, ಕೋಡಿಂಬಾಡಿ ಗ್ರಾ.ಪಂ ಸದಸ್ಯ ರಾಮಣ್ಣ ಗೌಡ ಗುಂಡೋಲೆ, ಲಕ್ಷ್ಮಣ ಗೌಡ ಕೊಡಿಪ್ಪಾಡಿ, ಮುಖ್ಯ ಕಾರ್ಯನಿರ್ವಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.