ಪುತ್ತೂರು: ಕೊರೊನಾ ಮುಕ್ತ ಪುತ್ತೂರಿಗಾಗಿ ದಿಟ್ಟ ಹೆಜ್ಜೆ ಎಂಬ ಧ್ಯೇಯ ವಾಕ್ಯದೊಂದಿಗೆ ಸೇವೆ ಗೈಯುತ್ತಿರುವ ‘ಎಂ.ಆರ್ ಗ್ರೂಪ್ ನ ಎಚ್.ಎಂ.ಸಿ ಜನಜಾಗೃತ್’ ದಳದ ವತಿಯಿಂದ 70 ಮಂದಿ ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮವು ಜೂ.7ರಂದು ನಡೆಯಿತು.
ಶಾಸಕ ಸಂಜೀವ ಮಠಂದೂರು ರವರು ಆಹಾರ ಕಿಟ್ ವಿತರಿಸಿದರು. ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಸದಸ್ಯ ಪಿ.ಜಿ ಜಗನ್ನಿವಾಸ ರಾವ್, ಪೂಡಾದ ಅಧ್ಯಕ್ಷ ಬಾಮಿ ಅಶೋಕ್ ಶೆಣೈ, ನ್ಯಾಯವಾದಿ ಎನ್.ಕೆ ಜಗನ್ನಿವಾಸ ರಾವ್, ಸಂತೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ. ಡಿ.ಕೆ ಹಮೀದ್, ದಾವುದ್ ಬನ್ನೂರು, ದಾಮೋಧರ ಹೆಗ್ಡೆ, ಪೌರಾಯುಕ್ತ ಮಧು ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಬರೀನಾಥ್, ಅರುಣ್, ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್, ರಾಮಚಂದ್ರ ಎಚ್.ಎಂ.ಸಿ ಜನಜಾಗೃತಿ ದಳದ ಗೌರವಾಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ, ಸಹ ಸಂಚಾಲಕರಾದ ಭಾನುಪ್ರಕಾಶ್, ಸಲೀಂ ಬರೆಪ್ಪಾಡಿ, ನಿಹಾಲ್ ಉಪಸ್ಥಿತರಿದ್ದರು. ಸಂಚಾಲಕ ಅಬ್ದುಲ್ ರಜಾಕ್ ಸ್ವಾಗತಿಸಿ, ವಂದಿಸಿದರು.