ವಿಟ್ಲ: ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ವಿಟ್ಲ ಪೊಲೀಸರು ಒಬ್ಬ ಆರೋಪಿ ಮತ್ತು ಮದ್ಯವನ್ನು ವಶಪಡಿಸಿಕೊಂಡ ಘಟನೆ ಮಿತ್ತೂರು ಎಂಬಲ್ಲಿ ನಡೆದಿದೆ.
ಆರೋಪಿ ಇಡ್ಕಿದು ಗ್ರಾಮದ ಮಿತ್ತೂರು ನಿವಾಸಿ ವಸಂತ ಪೂಜಾರಿ(44) ಬಂಧಿತ ಆರೋಪಿ ಆರೋಪಿ ತನ್ನ ಮನೆಯ ಜಗುಲಿಯಲ್ಲಿ ಮದ್ಯದ ಬಾಟ್ಲಿಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರ ಆದೇಶದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರೋಬೆಷನರಿ ಪಿ ಎಸ್ ಐ ರಾಮಕೃಷ್ಣ, ವಿಟ್ಲ ಪೊಲೀಸ್ ಠಾಣಾ ಪ್ರೋಬೇಷನರಿ ಪಿಎಸ್‌ಐ ಮಂಜುನಾಥ, ವಿಟ್ಲ ಪೊಲೀಸ್ ಠಾಣಾ ಜೀಪಿನ ಚಾಲಕ ಪ್ರವೀಣ ಅವರ ಜೊತೆಯಲ್ಲಿ ಸ್ಥಳಕ್ಕೆ ದಾಳಿ ನಡೆಸಿದೆ.
ಈ ಸಂದರ್ಭ ಬಾಗ್ ಪೈಪರ್ ವಿಸ್ಕಿ ಕಂಪನಿಯ ಹೆಸರಿನ 180 ಎಂ ಎಲ್‌ನ 130 ಸ್ಯಾಚೆಟ್ ಪ್ಯಾಕೆಟ್ ಗಳು ಮತ್ತು ಬಾಗ್ ಪೈಪರ್ ವಿಸ್ಕಿ ಕಂಪನಿಯ 90 ಎಮ್ ಎಲ್ ನ 4 ಸ್ಯಾಚೆಟ್ ಪ್ಯಾಕೆಟ್ ಗಳು ಹಾಗೂ 330 ಎಮ್ ಎಲ್ ನ ಯುಬಿ ಎಕ್ಸ್ ಪರ್ಟ್ ಸ್ಟ್ರಾಂಗ್ ಬಿಯರ್ ಹೆಸರಿನ 32 ಬಾಟ್ಲಿಗಳು ಹಾಗೂ ಮೈಸೂರು ಲಾನ್ಸರ್ ವಿಸ್ಕಿ ಹೆಸರಿನ 90 ಎಮ್ ಎಲ್ 263 ಸ್ಯಾಚೆಟ್ ಪ್ಯಾಕೇಟ್‌ಗಳು ಸೇರಿದಂತೆ ಒಟ್ಟು 57.99 ಲೀಟರ್ ಪತ್ತೆಯಾಗಿದೆ. ಒಟ್ಟು ವಶಪಡಿಸಿಕೊಂಡ ಮದ್ಯದ ಮೌಲ್ಯ 20,525 ರೂ. ಎಂದು ಅಂದಾಜಿಸಲಾಗಿದೆ.